ಎಷ್ಟು ಹೇಳಿದ್ರೂ ಗುಟ್ಕಾ ತಿನ್ನೋದು ಬಿಡ್ತಿಲ್ಲ, ಪತಿ ಚಟಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುಟ್ಕಾ ಸೇವನೆಯ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.

ಕರ್ವಾ ಚೌತ್ನಂದು ದಿನವಿಡೀ ಉಪವಾಸದಲ್ಲಿದ್ದ ಮಹಿಳೆ ಸಂಜೆಯ ವೇಳೆ ಪತ್ನಿಗೆ ಪೂಜೆ ಮಾಡಲು ಬಂದಿದ್ದಾಳೆ. ಈ ವೇಳೆಯೂ ಆತ ಗುಟ್ಕಾ ಜಗಿಯುತ್ತಿದನ್ನು ಕಂಡು ಬೇಸರಗೊಂಡಿದ್ದಾಳೆ. ಜೊತೆಗೆ ಈ ವಿಚಾರವಾಗಿ ಜಗಳ ನಡೆದಿದ್ದು, ಬಳಿಕ ಪೂಜಾ ವಿಧಿವಿಧಾನ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಭಾನುವಾರ ರಾತ್ರಿ ಹಮೀರ್‌ಪುರದ ಜಲಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಲಾಲ್‌ಪುರ ಗ್ರಾಮದ ಸರಿಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸಾರಿಕಾ(24) ಎಂದು ಗುರುತಿಸಲಾಗಿದ್ದು, ಈಕೆ ಜಲಾಲ್‌ಪುರ ನಿವಾಸಿಯಾದ ಸುಲಭ್ ನಾಮದೇವ್‌ನನ್ನು 2021 ರಲ್ಲಿ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಪತಿಯ ಗುಟ್ಕಾ ಜಗಿಯುವ ಚಟಕ್ಕೆ ಬೇಸತ್ತು ಸಾಕಷ್ಟು ಸಲ ಆತನೊಂದಿಗೆ ಜಗಳವಾಡಿದ್ದಳು.

ಇತ್ತೀಚಿಗಷ್ಟೇ ಕರ್ವಾ ಚೌತ್ನಂದು ಮತ್ತೆ ಜಗಳ ನಡೆದಿದೆ. ಬಳಿಕ ಪತಿ ಪತ್ನಿ ಇಬ್ಬರೂ ರಾತ್ರಿಯ ಊಟವನ್ನೂ ಮಾಡದೆ ಬೇರೆ ಬೇರೆ ಕೋಣೆಗಳಲ್ಲಿ ಮಲಗಿದ್ದರು. ಸೋಮವಾರ ಬೆಳಗ್ಗೆ ಪತಿ ಎದ್ದು ನೋಡಿದಾಗ ಪತ್ನಿ ಮಲಗುವ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!