February 5, 2026
Thursday, February 5, 2026
spot_img

ನೀವು ಎಷ್ಟೇ ಕಿರುಚಾಡಬಹುದು ಆದರೆ, ನನ್ನ ಸಮಾಧಿ ತೋಡಲು ಸಾಧ್ಯವಿಲ್ಲ: ರಾಜ್ಯಸಭೆಯಲ್ಲಿ ಗುಡುಗಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಎಷ್ಟೇ ಕಿರುಚಾಡಬಹುದು ಆದರೆ, ನೀವು ನನ್ನ ಸಮಾಧಿ ತೋಡಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಪ್ರತಿಪಕ್ಷಗಳ ಕಬ್ರ್ ಖುದೇಗಿ ಹೇಳಿಕೆ ಉಲ್ಲೇಖಿಸಿ,ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ,ಪ್ರತಿಪಕ್ಷಗಳಿಗೆ ನನ್ನ ಮೇಲೆ ಎಷ್ಟು ದ್ವೇಷವಿದೆ ಎಂಬುದು ಅವರ ಕಿರುಚಾಟದಿಂದಲೇ ಗೊತ್ತಾಗುತ್ತದೆ. ಆದರೆ ನೀವು ಎಷ್ಟೇ ಕಿರುಚಾಡಬಹುದು ಆದರೆ, ನೀವು ನನ್ನ ಸಮಾಧಿ ತೋಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಇದೇ ವೇಳೆ ಗುಜರಾತಿನ ಮಹಾತ್ಮಾ ಗಾಂಧಿಯವರ ಸರ್ ನೇಮ್ ಕದ್ದಿದ್ದಾರೆ ಎಂದು ಗಾಂಧಿ ಕುಟುಂಬವನ್ನು ಕುಟುಕಿದ ಮೋದಿ, ದೇಶವು ಕಾಂಗ್ರೆಸ್‌ನ ಮೊದಲ ಕುಟುಂಬಕ್ಕೆ ದಶಕಗಳಿಂದ ಅವಕಾಶ ನೀಡಿತು. ಆದರೆ ಅವರು ‘ಗರೀಬಿ ಹಠಾವೋ’ ಎಂಬ ಘೋಷಣೆಗಳ ಮೂಲಕ ಜನರನ್ನು ದಾರಿ ತಪ್ಪಿಸಿದ್ರು ಎಂದು ಕಿಡಿಕಾರಿದರು.

ಕೇಂದ್ರ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಅದು ಕಾಂಗ್ರೆಸ್ ಪಕ್ಷದಲ್ಲಿನ ಸಿಖ್ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದರು. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಸಂಸದರ ಕುಟುಂಬವನ್ನು ಅವಮಾನಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ದ್ವೇಷವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !