ಹೊಸದಿಗಂತ ವರದಿ ಶಿವಮೊಗ್ಗ:
ನನ್ನ ಬಗ್ಗೆ ಗುತ್ತಿಗೆದಾರ ಮಾಡಿದ್ದ ಆರೋಪದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವ ನ್ಯಾಯಾಲಯಕ್ಕೆ ಬೇಕಾದರೂ ಹೋಗಿ ಹೋರಾಟ ಮಾಡಲಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವ ವಿರುದ್ಧ ಹೋರಾಟ ನಡೆಸುವುದಾಗಿ ಡಿಕೆಶಿ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿದರು.
ಡಿಕೆಶಿ ಯಾವ ಕೋರ್ಟ್‌ಗೆ ಬೇಕಾದರೂ ಹೋಗಿ ದೂರು ದಾಖಲಿಸಲಿ. ಅಲ್ಲಿ ನಾನು ಗೆದ್ದು ಬರುವ ವಿಶ್ವಾಸ ಇದೆ. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಯಾವುದೇ ಕೈ ಬರಹದ ರೂಪದಲ್ಲಿ ಏನೂ ಬರೆದಿಟ್ಟಿಲ್ಲ. ವಾಟ್ಸಪ್‌ನಲ್ಲಿ ಟೈಪ್ ಮಾಡಿರುವ ಮಾಹಿತಿ ಮಾತ್ರ ಇದೆ. ಅದರಲ್ಲಿ ಗಟ್ಟಿತನ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಾತ ಯಾವುದೇ ಸಹಿ ಹಾಕಿ ದೂರು ದಾಖಲಿಸಿಲ್ಲ ಎಂದರು.