Monday, October 2, 2023

Latest Posts

ಇನ್ಮುಂದೆ ಬಿಲ್ ಪಾವತಿಗೆ ಮೊಬೈಲ್ ನಂಬರ್ ಕೇಳುವಂತಿಲ್ಲ: ಐಟಿ ಇಲಾಖೆ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಪಿಂಗ್ ಮಾಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಖರೀದಿ ಮಾಡುವಾಗ ಇನ್ಮುಂದೆ ಬಳಕೆದಾರರ ಒಪ್ಪಿಗೆ ಇಲ್ಲದೇ ವೈಯಕ್ತಿಕ ಫೋನ್ ನಂಬರ್ ಪಡೆದುಕೊಳ್ಳುವುದು ನಿಯಮಗಳ ಉಲ್ಲಂಘನೆ ಎಂದು ಐಟಿ ಇಲಾಖೆ ಹೇಳಿದೆ. ಇಂತಹ ಘಟನೆಗಳು ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈದರಬಾದ್ ನಗರದ ಮಲಕಪೇಟೆಯಲ್ಲಿರುವ ಡೆಕಾಥ್ಲಾನ್ ಸಂಸ್ಥೆಗೆ ಎಚ್ಚರಿಕೆ ನೀಡಿದೆ.”

ಕಾಲ್ ಸೆಂಟರ್​​ಗಳಿಂದ ಬರುವ ದೂರವಾಣಿ ಕರೆಗಳು ನಗರವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿವೆ. ವೈಯಕ್ತಿಕ ಫೋನ್ ಸಂಖ್ಯೆಯನ್ನು ಅವರು ಹೇಗೆ ತಿಳಿದಿದ್ದಾರೆಂದು ಯಾರಿಗೂ ಅರ್ಥವಾಗುವುದಿಲ್ಲ. ಆದರೆ, ಬೆಳಗ್ಗೆ ಮತ್ತು ರಾತ್ರಿ ಬರುವ ಈ ಫೋನ್ ಕರೆಗಳು ಜನರಿಗೆ ಕಿರುಕುಳ ನೀಡುತ್ತಿರುತ್ತದೆ.

ಖರೀದಿ ಮಾಡುವಾಗ ಕಡ್ಡಾಯವಾಗಿ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಳ್ಳುವ ಅವರು, ಅವನ್ನು ಕಾಲ್ ಸೆಂಟರ್‌ಗಳಿಗೆ ನೀಡುತ್ತಿದ್ದಾರೆ. ಈ ಮಾಹಿತಿ ಸೈಬರ್ ಕಳ್ಳರ ಪಾಲಾಗುತ್ತಿರುವುದರಿಂದ ಅನೇಕರು ಲಕ್ಷಗಟ್ಟಲೆ ಹಣ ಕಳೆದುಕೊಳ್ಳುತ್ತಿದ್ದಾರೆ. ವೈಯಕ್ತಿಕ ಮಾಹಿತಿಗಳು ಮಾರುಕಟ್ಟೆಯಲ್ಲಿ ಸರಕಿನಂತೆ ಮಾರಾಟವಾಗುತ್ತಿರುವುದರಿಂದ ಗ್ರಾಹಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಬಿಲ್ ಪಾವತಿಸಲು ವೈಯಕ್ತಿಕ ದೂರವಾಣಿ ಸಂಖ್ಯೆ ಕಡ್ಡಾಯ ಎಂದು ಡೆಕಾಥ್ಲಾನ್ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಮಲಕಪೇಟೆಯ ಡೆಕಾಥ್ಲಾನ್‌ನಲ್ಲಿ ಶಾಪಿಂಗ್ ಮಾಡಿದ ತಾರ್ನಾಕ ಪ್ರದೇಶದ ಗ್ರಾಹಕ ದೂರು ನೀಡಿದ್ದರು. ಇದು ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಐಟಿ ಇಲಾಖೆ ಪ್ರತಿಕ್ರಿಯಿಸಿದೆ.
ಕಂಪನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಆದರೆ, ಕೇವಲ ನೋಟಿಸ್ ನೀಡಿ ಬಿಟ್ಟು ಬಿಡುವ ಬದಲು ರೂ. 25 ಸಾವಿರ ದಂಡ ವಿಧಿಸಿದರೆ ಬೇರೆ ಕಂಪನಿಗಳು ಇಂಥ ಕೆಲಸ ಮಾಡುವುದಿಲ್ಲ ಎಂದು ದೂರುದಾರ ವಿಜಯಗೋಪಾಲ್ ಅಭಿಪ್ರಾಯಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!