May 29, 2026
Friday, May 29, 2026
spot_img

ಇನ್ಮುಂದೆ ಕಚೇರಿಗೆ ಅಲೆಯುವಂತಿಲ್ಲ! ಮನೆಯಲ್ಲೇ ಕುಳಿತು ‘ಇ-ಖಾತಾ’ ಡೌನ್‌ಲೋಡ್ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ತಿ ಮಾಲೀಕರಿಗೆ ಮತ್ತು ತೆರಿಗೆದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಇ-ಖಾತಾ ಪಡೆಯಲು ಸರ್ಕಾರಿ ಕಚೇರಿಗಳ ಮುಂದೆ ಸಾಲು ನಿಲ್ಲುವ ಅಥವಾ ಅಧಿಕಾರಿಗಳ ಹಿಂದೆ ಅಲೆಯುವ ಅವಶ್ಯಕತೆ ಇಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಜಿಬಿಎ ಈಗ ಆನ್‌ಲೈನ್ ಇ-ಖಾತಾ ಡೌನ್‌ಲೋಡ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಆಡಳಿತಾತ್ಮಕ ವಿಳಂಬಕ್ಕೆ ಮುಕ್ತಿ ನೀಡಲು ಮತ್ತು ಪಾರದರ್ಶಕತೆಯನ್ನು ತರಲು ಈ ಕ್ರಮ ಕೈಗೊಳ್ಳಲಾಗಿದ್ದು, ಸುಮಾರು 13 ಲಕ್ಷ ಆಸ್ತಿಗಳ ಇ-ಖಾತಾಗಳನ್ನು ಈಗ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಕೇವಲ ನಿಮ್ಮ ಆಸ್ತಿ ತೆರಿಗೆ ಐಡಿ ಬಳಸುವ ಮೂಲಕ ಕ್ಷಣಾರ್ಧದಲ್ಲಿ ಅಧಿಕೃತ ದಾಖಲೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಬಳಸಿ ಇ-ಖಾತಾ ಡೌನ್‌ಲೋಡ್ ಮಾಡಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ:

ಮೊದಲು ಅಧಿಕೃತ ಜಾಲತಾಣ https://bbmpeaasthi.karnataka.gov.in/ ಗೆ ಭೇಟಿ ನೀಡಿ.

ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಫೋನ್‌ಗೆ ಬರುವ OTP ಬಳಸಿ ಲಾಗಿನ್ ಆಗಿ.

ಲಾಗಿನ್ ಆದ ನಂತರ, ನಿಮ್ಮ ಆಸ್ತಿಗೆ ಸಂಬಂಧಿಸಿದ SAS ಅಪ್ಲಿಕೇಶನ್ ಪ್ರಾಪರ್ಟಿ ತೆರಿಗೆ ಐಡಿ ಅನ್ನು ನಿಖರವಾಗಿ ನಮೂದಿಸಿ.

ವಿವರಗಳು ಸರಿಯಾಗಿದ್ದರೆ, ನಿಮ್ಮ ಡಿಜಿಟಲ್ ಇ-ಖಾತಾ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು.

ನಿಮ್ಮ ಆಸ್ತಿಯ ದಾಖಲಾತಿಗಳನ್ನು ಕಾನೂನುಬದ್ಧವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ಜಿಬಿಎ ತಂದಿರುವ ಈ ತಾಂತ್ರಿಕ ಬದಲಾವಣೆಯ ಸದುಪಯೋಗ ಪಡಿಸಿಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !