ಸದನದಲ್ಲಿ ಸಾವರ್ಕರ್ ಫೋಟೊ ಅವಶ್ಯವಿಲ್ಲ: ಸಿದ್ದರಾಮಯ್ಯ ವಿರೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯ ಸುವರ್ಣ ವಿಧಾನ ಸಭಾಂಗಣದಲ್ಲಿ ಸಾವರ್ಕರ್ ಸೇರಿದಂತೆ ಏಳು ಗಣ್ಯರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಸೇರಿ ಒಟ್ಟು ಏಳು ಮಹನೀಯರ ಭಾವಚಿತ್ರಗಳನ್ನು ಇಂದು ಅನಾವರಣ ಮಾಡಲು ಸಿದ್ಧತೆ ನಡೆದಿದೆ.

ಈ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದು, ಸಾವರ್ಕರ್ ಫೋಟೊ ಬಗ್ಗೆ ಮಾಹಿತಿಯೇ ಇಲ್ಲ, ಯಾವ ಕಾರ್ಯಕ್ರಮಕ್ಕೂ ನಮ್ಮನ್ನು ಕರೆದಿಲ್ಲ. ಏಕಾಏಕಿ ಈ ನಿರ್ಧಾರ ಯಾಕೆ? ಇದು ಬಿಜೆಪಿ ಹಿಡನ್ ಅಜೆಂಡಾ. ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಕೈವಾಡವಿದೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಹೀಗಿರುವಾಗ ಸಾವರ್ಕರ್ ಅವರ ಫೋಟೊ ಹಾಕೋದು ಅನಾವಶ್ಯ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!