October 11, 2026
Sunday, October 11, 2026
spot_img

ಹಾದಿಬೀದಿಲಿ ಚರ್ಚೆ ಮಾಡೋದು ಬೇಡ ಎಚ್‌ಡಿಕೆ ವಿಧಾನಸೌಧಕ್ಕೆ ಬರಬಹುದು: ಯತೀಂದ್ರ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತನಾಡ್ತಿದ್ದಾರೆ, ಅವರು ಹಾದಿಬೀದಿಲಿ ಮಾತಾಡೋದು ಬಿಟ್ಟು ಚರ್ಚೆ ಮಾಡುವುದೇ ಉದ್ದೇಶವಾದರೆ ವಿಧಾನಸೌಧಕ್ಕೆ ಬರಲಿ. ಹಾದಿಬೀದಿಯಲ್ಲಿ ಕುಳಿತು ಚರ್ಚಿಸುವುದು ಯಾಕೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಿಡದಿಯಲ್ಲಿ ನಡೆದಿರುವ ಹೋ ರಾಟದಿಂದ ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಬಿಡದಿ ಟೌನ್ ಶಿಪ್ ಜನರ ಪರವಾಗಿದ್ದು, ಸರ್ಕಾರ ಟೌನ್ ಶಿಪ್ ನಿರ್ಮಾಣ ಮಾಡಿಯೇ ಮಾಡುತ್ತದೆ ಎಂದರು. ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಬ್ಬರೂ ಪತ್ರ ಬರೆದಿದ್ದಾರೆ. ಮಾತುಕತೆ ಆಗಬೇಕು ಎಂದಾದರೆ ವಿಧಾನಸೌಧಕ್ಕೆ ಬರಬೇಕು. ಸರ್ಕಾರ ನಡೆಯುವ ಜಾಗದಲ್ಲಿ ಚರ್ಚೆ ಆಗಬೇಕು ಎಂದರು.

ಮುಖ್ಯಮಂತ್ರಿಯವರು ಸರಿಯಾದ ಸ್ಥಳಕ್ಕೆ ಅವರನ್ನು ಕರೆದಿದ್ದಾರೆ. ನಿಜವಾಗಿಯೂ ಕುಮಾರಸ್ವಾಮಿ ಅವರ ವಾದದಲ್ಲಿ ಶಕ್ತಿ ಇದ್ದರೆ ಅಲ್ಲಿಗೆ ಬರಲಿ ಎಂದು ಸವಾಲು ಹಾಕಿದರು. ಬಿಡದಿ ಟೌನ್ ಶಿಪ್ ಯೋಜನೆಗೆ ಕೆಲ ರೈ ತರಷ್ಟೇ ವಿರೋಧ ಮಾಡುತ್ತಿದ್ದಾರೆ. ಅಲ್ಲಿನ ಹಲವು ರೈತರು ಟೌನ್ ಶಿಪ್ ಪರವಿದ್ದಾರೆ. ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂಬ ಖುಷಿಯಲ್ಲಿದ್ದಾರೆ. ಹಿಂದೆ ಕುಮಾರಸ್ವಾಮಿಯವರೇ ಭೂಸ್ವಾಧೀನ ಮಾಡಿರುವುದು ಎಂದು ಯತೀಂದ್ರ ಹೇಳಿದರು.

Must Read