ನಮ್ಮನ್ನು ಬೆದರಿಸಲು ಯಾರಿಗೂ ಅನುಮತಿ ನೀಡಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಪ್ರಧಾನಿ ಮೋದಿಯನ್ನು ನಿಂದಿಸಿದ ಮಾಲ್ಡೀವ್ಸ್ ಗೆ ಪ್ರವಾಸೋದ್ಯಮದಲ್ಲಿ ಹೊಡೆತ ಬಿದ್ದಿದೆ.

ಇದರ ನಡುವೆ ಚೀನಾ ಪ್ರವಾಸದಲ್ಲಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಭಾಷಣ ಮತ್ತೆ ವಿವಾದದ ಕಿಡಿ ಹೊತ್ತಿಸಿದೆ. ನಾವು ಸಣ್ಣ ರಾಷ್ಟ್ರವಾಗಿರಬಹುದು. ಆದರೆ ನಮ್ಮನ್ನು ಬೆದರಿಸಲು ಯಾರಿಗೂ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ.

ಚೀನಾ ಪ್ರವಾಸದಿಂದ ವಾಪಸ್ ಆದ ಮುಯಿಝಿ ಇದೀಗ ಸುದ್ದಿಗೋಷ್ಠಿ ನಡೆಸಿ ಪರೋಕ್ಷವಾಗಿ ಭಾರತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಚಿವರ ವಜಾ, ಪ್ರತಿಪಕ್ಷಗಳ ತರಾಟೆ ನಡುವೆ ಮಾಲ್ಡೀವ್ಸ್ ಅಧ್ಯಕ್ಷ ಎಚ್ಚರಿಕೆ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಮಾಲ್ಡೀವ್ಸ್ ಎಲ್ಲಾ ವಿಭಾಗದಲ್ಲೂ ಸಮರ್ಥವಾಗಿದೆ. ಸಣ್ಣ ರಾಷ್ಟ್ರ ಎಂದು ಕೆಣಕುವುದು ಸರಿಯಲ್ಲ. ನಮ್ಮನ್ನು ಬೆದರಿಸಲು, ಕೆಣಕಲು ನಾವು ಯಾವುದೇ ರಾಷ್ಟ್ರಕ್ಕೂ ಪರವಾನಗಿ ನೀಡಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಮುಯಿಝಿ ಚೀನಾಪರ ಒಲವು ತೋರುತ್ತಿರುವುದು ಬಹಿರಂಗವಾಗಿ ಉಳಿದಿಲ್ಲ. ಅಧ್ಯಕ್ಷರಾಗಿ ಆಯ್ಕೆಯಾದ ಆರಂಭಿಕ ಹಂತದಲ್ಲೇ ಇಂಡಿಯಾ ಔಟ್ ಅನ್ನೋ ಹೋರಾಟ ಆರಂಭಿಸಿದ್ದರು. ಈ ಮೂಲಕ ಮಾಲ್ಡೀವ್ಸ್‌ನಲ್ಲಿದ್ದ ಭಾರತೀಯ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದರು.

ಚೀನಾ ಕೈಗೊಂಬೆ ರೀತಿ ವರ್ತಿಸುತ್ತಿರುವ ಮಾಲ್ಡೀವ್ಸ್‌ಗೆ ಸೆಡ್ಡು ಹೊಡೆಯಲು ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರು. ಇದು ಮಾಲ್ಡೀವ್ಸ್ ಸರ್ಕಾರದ ಆತಂಕಕ್ಕೆ ಕಾರಣವಾಗಿತ್ತು. ಕಾರಣ ಅತೀ ಹೆಚ್ಚು ಭಾರತೀಯರು ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳುತ್ತಾರೆ. ಈ ಪ್ರವಾಸಿಗರ ಸಂಖ್ಯೆ ಕಡಿಮೆಯಾದರೆ ಮಾಲ್ಡೀವ್ಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!