ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಬಾಲಿವುಡ್ ಅಂಗಳದಲ್ಲಿ ಹಲವಾರು ಫೇಕ್ ನ್ಯೂಸ್ ಗಳು ಹರಿದಾಡುತ್ತಿವೆ. ಯಾವುದನ್ನು ನಂಬಬೇಕು, ನಂಬಬಾರದು ಎಂದು ಜನ ಗೊಂದಲದಲ್ಲಿದ್ದಾರೆ. ಅಂತಹುದೇ ಸುದ್ದಿಯೊಂದರ ಸಾಲಿಗೆ ಬಾಲಿವುಡ್ ಸ್ಟಾರ್ ಗೋವಿಂದಾ ದಂಪತಿ ಸೇರಿದ್ದಾರೆ.
ಹೌದು! ಗೋವಿಂದಾ ಹಾಗೂ ಸುನೀತಾ ಅಹುಜಾ ಡಿವೋರ್ಸ್ ಪಡೆಯಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಹರಿದಾಡುತ್ತಿದೆ. ಸುನೀತಾ 6 ತಿಂಗಳ ಹಿಂದೆ ನಟನಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದರು, ಆದರೆ ಈಗ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಗೋವಿಂದಾ ವಕೀಲರು ತಿಳಿಸಿದ್ದಾರೆ.
ಈ ಊಹಾಪೋಹಗಳ ನಡುವೆ, ಸುನೀತಾ ಅವರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೇರೆ ಬೇರೆ ಇರ್ತೀವಿ ಅಂದ್ರೆ ನಾವು ಡಿವೋರ್ಸ್ ತಗೊಂಡಿದ್ದೀವಿ ಅಂತ ಅರ್ಥ ಅಲ್ಲ. ಗೋವಿಂದಾ ರಾಜಕೀಯಕ್ಕೆ ಜಾಯಿನ್ ಆಗೋವಾಗ ಕಾರ್ಯಕರ್ತರೆಲ್ಲಾ ಮನೆಗೆ ಬರ್ತಿದ್ರು. ಆ ಮನೇಲಿ ನಾವು ಇರುತ್ತೇವೆ , ನಾವು ಶಾರ್ಟ್ಸ್ ಹಾಕೊಂಡು ಮನೆ ತುಂಬಾ ಓಡಾಡ್ತೀವಿ, ಇದು ಸರಿ ಹೋಗಲ್ಲ ಅಂತ ನಾವು ಎದುರುಗಡೆ ಆಫೀಸ್ ತಗೊಂಡ್ವಿ. ನನ್ನ ಹಾಗೂ ಗೋವಿಂದನ ಯಾರಪ್ಪನಿಂದಲೂ ಬೇರೆ ಮಾಡೋಕಾಗಲ್ಲ ಈ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.