Sunday, October 1, 2023

Latest Posts

ಪಾಸ್​​ಪೋರ್ಟ್ ಇಲ್ಲ, ವೀಸಾ ಇಲ್ಲ: ಪಾಕ್ ಪ್ರೇಮಿಯ ಭೇಟಿಗಾಗಿ ಹೊರಟ ಭಾರತದ ಬಾಲಕಿ ಪೊಲೀಸ್ ವಶಕ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಸೀಮಾ ಹೈದರ್ ಭಾರತಕ್ಕೆ ಬಂದು ಸಚಿನ್ ಮೀನಾ ಜೊತೆ ಮದುವೆಯಾದ ವಿಚಾರ ಹೊರಬಂದ ಬೆನ್ನಲ್ಲೇ ಇತ್ತ ಭಾರತದ ಅಂಜು ಪಾಕಿಸ್ತಾನಕ್ಕೆ ತೆರಳಿ ನಾಸ್ರುಲ್ಲಾ ಜೊತೆ ಮದುವೆ ಘಟನೆಗಳು ವಿವಾದಕ್ಕೂ ಕಾರಣವಾಗಿದೆ.

ಇದರ ನಡುವೆ ಇದೀಗ 16 ವರ್ಷದ ಅಪ್ರಾಪ್ತೆ ತನ್ನ ಪಾಕಿಸ್ತಾನದ ಬಾಯ್‌ಫ್ರೆಂಡ್ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಜೈಪುರ ವಿಮಾನ ನಿಲ್ದಾಣದಲ್ಲಿ ಅಪ್ರಾಪ್ತೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜಸ್ಥಾನದ ಸಿಕಾರ್ ಜಿಲ್ಲೆಯ ಶ್ರೀಮಾಧೋಪುರ್ ಗ್ರಾಮದ ನಿವಾಸಿಯಾಗಿರುವ 16 ವರ್ಷದ ಬಾಲಕಿ ಇನ್‌ಸ್ಟಾಗ್ರಾಂ ಮೂಲಕ ಪಾಕಿಸ್ತಾನದ ಅಸ್ಲಾಂ ಲಾಹೋರಿ ಪರಿಚಯವಾಗಿದೆ. ಬಳಿಕ ಬಾಲಕಿ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಕಳೆದ ಒಂದು ವರ್ಷದಿಂದ ಅಸ್ಲಾಂ ಲಾಹೋರಿ ಹಾಗೂ ಬಾಲಕಿ ಪ್ರೀತಿಸುತ್ತಿದ್ದಾರೆ. ಪ್ರತಿ ದಿನ ವಿಡಿಯೋ ಕಾಲ್, ಮೆಸೇಜ್ ಸೇರಿದಂತೆ ಸಂಪರ್ಕ ನಡೆಯುತ್ತಲೇ ಇತ್ತು.

ಹೀಗೆ ಮಾತು ಬೆಳೆದು ಅಸ್ಲಾಂ ಲಾಹೋರಿ, ಪಾಕಿಸ್ತಾನಕ್ಕೆ ಬರುವಂತೆ ಅಪ್ರಾಪ್ತೆಗೆ ಆಹ್ವಾನ ನೀಡಿದ್ದಾನೆ. ವಿಮಾನ ನಿಲ್ದಾಣಕ್ಕೆ ತೆರಳಿ ಟಿಕೆಟ್ ಖರೀದಿಸಿ ನೇರವಾಗಿ ಪಾಕಿಸ್ತಾನಕ್ಕೆ ಬರುವಂತೆ ಸೂಚಿಸಿದ್ದಾನೆ. ಸ್ವರ್ಗದಂತಿರುವ ಪಾಕಿಸ್ತಾನದಲ್ಲಿ ನಾವು ಬದುಕೋಣ ಎಂದು ಅಪ್ರಾಪ್ತೆಗೆ ಮಾತು ಕೊಟ್ಟಿದ್ದಾನೆ. ಇದನ್ನೆಲ್ಲಾ ನಂಬಿ ಅಪ್ತಾಪ್ತೆ ನೇರವಾಗಿ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ.

ಜೈಪುರ ವಿಮಾನ ನಿಲ್ದಾಣಕ್ಕೆ ಬಂದ ಅಪ್ರಾಪ್ತೆ ಪಾಕಿಸ್ತಾನಕ್ಕೆ ಟಿಕೆಟ್ ಖರೀದಿಸಲು ಮುಂದಾಗಿದ್ದಾಳೆ. ಆದರೆ ಈಕೆ ಬಳಿ ಪಾಸ್‌ಪೋರ್ಟ್ ಇಲ್ಲ, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಬಿಟ್ಟರೆ ಇನ್ಯಾವ ದಾಖಲೆಯೂ ಇಲ್ಲ. ಇದರಿಂದ ಅನುಮಾನ ಗೊಂಡ ವಿಮಾನ ನಿಲ್ದಾಣದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಅಪ್ರಾಪ್ತೆಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಈ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಇನ್‌ಸ್ಟಾಗ್ರಾಂ ಲವ್ ಸ್ಟೋರಿ ಬಹಿರಂಗಪಡಿಸಿದ್ದಾಳೆ. ಆಕೆಗೆ ಯುವಕನ ಕುರಿತು ಹೆಚ್ಚಿನ ಮಾಹಿತಿಯೂ ಇಲ್ಲ. ಇದರ ಹಿಂದೆ ಭಾರಿ ಷಡ್ಯಂತ್ರವಿರುವುದು ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಕೇಳಿ ದಂಗಾದ ಪೊಲೀಸರು ಜೈಪುರ ವಿಮಾನ ನಿಲ್ದಾಣದತ್ತ ದೌಡಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!