ದೇಶದ ಯಾವುದೇ ಪ್ರಧಾನಿ ಪತ್ನಿ ಇಲ್ಲದೇ ಇಲ್ಲ: ರಾಹುಲ್‌ ಗಾಂಧಿಗೆ ಲಾಲೂ ಸಲಹೆ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ದೇಶದ ಯಾವುದೇ ಪ್ರಧಾನಿ ಕೂಡ ಪತ್ನಿ ಇಲ್ಲದೇ ಇಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಹೇಳಿದ್ದಾರೆ.

ಮುಂದಿನ ಲೋಕ ಸಭೆಯಲ್ಲಿ ಪ್ರತಿಪಕ್ಷಗಳಿಂದ ಪ್ರಧಾನಮಂತ್ರಿಯ ಫೇಸ್‌ ಯಾರಾಗಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದ ಲಾಲು ಪ್ರಸಾದ್‌ ಯಾದವ್‌, ಪತ್ನಿ ಇಲ್ಲದೆ ಪ್ರಧಾನಮಂತ್ರಿಯ ಅಧಿಕೃತ ನಿವಾಸದಲ್ಲಿ ಇರುವುದು ತಪ್ಪು . ಯಾರೆಲ್ಲಾ ಪ್ರಧಾನಿಯಾಗ್ತಾರೋ ಅವರು ಪತ್ನಿ ಇಲ್ಲದೆ ಇರಬಾರದು. ಪತ್ನಿ ಇಲ್ಲದೆ ಪ್ರಧಾನಮಂತ್ರಿ ಕಚೇರಿಯಲ್ಲಿ ಇರುವುದು ತಪ್ಪು. ಇದನ್ನು ಯಾವುದೇ ಕಾರಣಕ್ಕೂ ಮಾಡಲಾರದು ಎಂದು ಹೇಳಿದ್ದಾರೆ.

ಈ ವೇಳೆ ರಾಹುಲ್‌ ಗಾಂಧಿಗೆ ಆದಷ್ಟು ಶೀಘ್ರವಾಗಿ ಮದುವೆಯಾಗುವಂತೆ ಹೇಳಿದ ಸಲಹೆಯನ್ನು ನೆನಪಿಸಿದರು.

ಜೂನ್‌ 23 ರಂದು ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಜಂಟಿ ಸಭೆ ನಡೆದಿತ್ತು. ಈ ವೇಳೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಗಡ್ಡವನ್ನು ಬೋಳಿಸಿಕೊಂಡು, ಆದಷ್ಟು ಬೇಗ ಮದುವೆಯಾಗುವಂತೆ ಅವರು ಸಲಹೆ ನೀಡಿದ್ದರು.

ನೀವು ಈಗಾಗಲೇ ಮದುವೆಯಾಗಬೇಕಿತ್ತು. ಈಗಲೂ ಕೂಡ ನಿಮಗೆ ಸಮಯವಿದೆ. ಈಗ ಕೂಡ ಸಮಯ ತಪ್ಪಿಲ್ಲ. ನೀವು ಮದುವೆಗೆ ಸಜ್ಜಾಗಿ ಮದುವೆಯ ಮೆರವಣಿಗೆಗೆ ಬರಲು ನಾವು ಸಿದ್ಧವಾಗಿದ್ದೇವೆ ಎಂದು ಲಾಲು ಪ್ರಸಾದ್‌ ಯಾದವ್‌ ಹೇಳುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!