ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ: ಪೋಲೆಂಡ್​ ನಲ್ಲಿ ಪ್ರಧಾನಿ ಮೋದಿ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೋಲೆಂಡ್​ನ ವಾರ್ಸಾದಲ್ಲಿ ಪೋಲಿಷ್ ಪ್ರಧಾನಿ ಡೊನಾಲ್ಡ್ ಟ್ರಷ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಭಾರತ ಮತ್ತು ಪೋಲೆಂಡ್ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಮೇಲ್ದರ್ಜೆಗೇರಿಸಿರುವುದಾಗಿ ಘೋಷಿಸಿದರು.

ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ , ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ‘ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಘರ್ಷಣೆಗಳು ನಮ್ಮೆಲ್ಲರಿಗೂ ಬಹಳ ಕಾಳಜಿಯ ವಿಷಯವಾಗಿದೆ’ ಎಂದು ಅವರು ಹೇಳಿದರು. ‘ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತವು ದೃಢವಾಗಿ ನಂಬುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಸುಂದರವಾದ ನಗರವಾದ ವಾರ್ಸಾದಲ್ಲಿ ನನಗೆ ಆತ್ಮೀಯ ಸ್ವಾಗತ ನೀಡಿದ ಪಿಎಂ ಟಸ್ಕ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನೀವು ದೀರ್ಘಕಾಲದವರೆಗೆ ಭಾರತದ ಸ್ನೇಹಿತರಾಗಿದ್ದೀರಿ ಮತ್ತು ಭಾರತ ಮತ್ತು ಪೋಲೆಂಡ್ ನಡುವಿನ ಸಂಬಂಧವನ್ನು ಹೆಚ್ಚಿಸಲು ನೀವು ದೊಡ್ಡ ಕೊಡುಗೆಯನ್ನು ಹೊಂದಿದ್ದೀರಿ. 45 ವರ್ಷಗಳ ನಂತರ ಇಂದು ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡಿದ್ದಾರೆ’ ಎಂದು ಮೋದಿ ಹೇಳಿದರು.

ಜಾಗತಿಕ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸುಧಾರಿಸುವುದು ಅಗತ್ಯ ಎಂದು ನಾವಿಬ್ಬರೂ ಒಪ್ಪುತ್ತೇವೆ. ಭಯೋತ್ಪಾದನೆ ನಮಗೆ ಗಮನಾರ್ಹ ಬೆದರಿಕೆಯಾಗಿದೆ. ಮಾನವೀಯತೆಯಲ್ಲಿ ನಂಬಿಕೆಯಿರುವ ಭಾರತ ಮತ್ತು ಪೋಲೆಂಡ್‌ನಂತಹ ದೇಶಗಳು ಹೆಚ್ಚು ಸಹಕರಿಸಬೇಕು. ಅದೇ ರೀತಿ, ಹವಾಮಾನ ಬದಲಾವಣೆ ಕೂಡ ಮುಖ್ಯ ಆದ್ಯತೆಯಾಗಿದೆ. ನಮ್ಮ ಸಾಮರ್ಥ್ಯಗಳನ್ನು ಸಂಯೋಜಿಸುವ ಮೂಲಕ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ, 2025ರ ಜನವರಿಯಲ್ಲಿ ಪೋಲೆಂಡ್ ನಿಮ್ಮ ಸಹಕಾರದೊಂದಿಗೆ ಭಾರತ-EU ಸಂಬಂಧಗಳನ್ನು ಬಲಪಡಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನನ್ನ ಮೂರನೇ ಅವಧಿಯ ಆರಂಭದಲ್ಲಿ ನನಗೆ ಈ ಅವಕಾಶ ಸಿಕ್ಕಿತು. ಇದಕ್ಕಾಗಿ ನಾನು ಸರ್ಕಾರ ಮತ್ತು ಪೋಲೆಂಡ್ ಜನತೆಗೆ ಧನ್ಯವಾದ ಹೇಳಲು ಬಯಸುತ್ತೇನೆ. 2022ರಲ್ಲಿ ಉಕ್ರೇನ್ ಸಂಘರ್ಷದ ಸಮಯದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ನೀವು ನೀಡಿದ ಸಹಾಯವನ್ನು ಭಾರತದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!