ಧಾರವಾಡದಲ್ಲಿ ಪ್ರಹ್ಲಾದ್ ಜೋಶಿಯ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ: ಯಡಿಯೂರಪ್ಪ

ಹೊಸದಿಗಂತ ವರದಿ,ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿಯ ಕಾರವಾರ ರಸ್ತೆ ಅರವಿಂದನಗರದ ನೂತನ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಃ ಶಿರಹಟ್ಟಿ ಫಕೀರ ದಿಂಗಾಲೇಶ್ವ ಸ್ವಾಮೀಜಿ ಜೋಶಿ ಅವರ ಬಗ್ಗೆ ತಪ್ಪಾಗಿ ತಿಳಿದಿರಬೇಕು. ನಾನು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮನವೊಲಿಸಲಾಗುವುದು ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಹಳ ದೊಡ್ಡ ಜನಪ್ರೀಯ ನಾಯಕರು. ಅವರು ಬಹಳ ಅಂತರದಿಂದ ಜಯಗಳಿಸುತ್ತಾರೆ. ಲಿಂಗಾಯತ ಸಮಾಜದ ಎಲ್ಲ ಸ್ವಾಮಿಗಳು ನಮ್ಮ ಪರವಾಗಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಅವರು ಜೋಶಿ ಅವರ ಮೇಲೆ ಮಾಡುತ್ತಿರುವ ಆರೋಪ ಹಿಂದೆ ನಮ್ಮ ಪಕ್ಷದ ಯಾವ ನಾಯಕರು ಇಲ್ಲ. ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ಜೋಶಿ ಅವರು ಲಿಂಗಾಯತ ನಾಯಕ ತುಳಿದಿದ್ದಾರೆ ಎಂಬುವುದಕ್ಕೆ ಒಂದು ಉದಾಹರಣೆ ನೀಡಲಿ. ಪ್ರಹ್ಲಾದ ಜೋಶಿ ಅವರು ಲಿಂಗಾಯತ, ಓಬಿಸಿ, ಎಸ್‌ಸಿ, ಎಸ್‌ಸ್ಟಿ ಎಂಬ ಬೆಂಧಭಾವವಿಲ್ಲದೆ ಎಲ್ಲ ಸಮಾಜ ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕರಾಗಿದ್ದಾರೆ. ಅದಕ್ಕಾಗಿ ಅವರಿಗೆ ದೊಡ್ಡ ಸ್ಥಾನಮಾನ ಸಿಕ್ಕಿವೆ. ಮಠಾಧಿಶರ ಮನವಲಿಕೆ ಮಾಡುತ್ತೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!