ನೋ ರೆಡ್ ಕಾರ್ಪೆಟ್: ಬೊಕ್ಕಸದ ಹಣ ಉಳಿಸಲು ಪಾಕಿಸ್ತಾನ ಸರ್ಕಾರದಿಂದ ಇನ್ನೊಂದು ಐಡಿಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ ಹಣ ಉಳಿಸಲು ಇನ್ನಷ್ಟು ‘ಐಡಿಯಾ’ಗಳಿಗೆ ಮೊರೆಹೋಗಿದೆ!

ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ರೆಡ್ ಕಾರ್ಪೆಟ್ ಬಳಸುವಂತಿಲ್ಲ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಆದೇಶ ಹೊರಡಿಸಿದ್ದಾರೆ. ರೆಡ್ ಕಾರ್ಪೆಟ್ ಬಳಕೆ ನಿಷೇಧಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹೊರೆ ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ. ಆದರೆ ರಾಜತಾಂತ್ರಿಕ ಅಧಿಕಾರಿಗಳು, ರಾಯಭಾರಿಗಳು ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಶಿಷ್ಟಾಚಾರವಾಗಿ ರೆಡ್ ಕಾರ್ಪೆಟ್ ಬಳಕೆ ಅವಕಾಶ ನೀಡಲಾಗಿದೆ.

ದೇಶದಲ್ಲಿನ ಹಣಕಾಸು ಸಂಕಷ್ಟ ನಿವಾರಣೆಗೆ ಮಿತವ್ಯಯದ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆ ಎಂದು ಇತ್ತೀಚೆಗಷ್ಟೇ ಪ್ರಧಾನಿ ಷರೀಫ್ ಹೇಳಿದ್ದರು. ಇದಲ್ಲದೆ ಕಳೆದ ವಾರ, ಪ್ರಧಾನಿ ಷರೀಫ್ ಹಾಗೂ ಸಂಪುಟ ಸದಸ್ಯರು ತಮ್ಮ ವೇತನ ಹಾಗೂ ಸರ್ಕಾರಿ ಸವಲತ್ತುಗಳನ್ನು ಸ್ವಯಂ ಪ್ರೇರಣೆಯಿಂದ ತ್ಯಜಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!