ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ, ರನ್ಯಾ ರಾವ್ ಗೆ ಕೈಗಾರಿಕೆ ಜಮೀನು ಮಂಜೂರಾತಿಯಲ್ಲಿ ಕೈಗಾರಿಕೆ ಸಚಿವರದ್ದಾಗಲಿ, ಹಿರಿಯ ಅಧಿಕಾರಿಗಳದ್ದಾಗಲಿ ಪಾತ್ರವಿಲ್ಲ ಎಂದು ಮಾಜಿ ಕೈಗಾರಿಕೆ ಸಚಿವ, ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ನೀಡಿಯಲ್ಲಿ ಮಾತನಾಡಿ, ಭೂ ಮಂಜೂರಾತಿ ಅರ್ಜಿಗಳ ಪರಿಶೀಲನೆಗೆ ಲ್ಯಾಂಡ್ ಅಡಿಟೆಡ್ ಕಮಿಟಿ ಮತ್ತು ಇಂಡಸ್ಟ್ರಿಯಲ್ ಸೆಕ್ರೆಟರಿ ಇರುತ್ತಾರೆ. 30 ಜನ ಹಿರಿಯ ಅಧಿಕಾರಿಗಳು ಸಾಧಕ-ಬಾಧಕ ಚರ್ಚಿಸಿ, ನಟಿ ರನ್ಯಾಗೆ ಜಾಗ ಅಲಾಟಮೆಂಟ್ ಮಾಡಿದ್ದಾರೆ ಎಂದರು.
ಇದರಲ್ಲಿ ಯಾವುದೇ ಅಧಿಕಾರಿಗಳ ಪಾತ್ರ ಅಥವಾ ಕಾನೂನು ಲೋಪದೋಷ ಇಲ್ಲ. ಯಾವುದೇ ರೀತಿ ನಾವು ಫೇವರ್ ಆಗಿ ಮಾಡಿಲ್ಲ. ಈ ಬಗ್ಗೆ ಎನೇ ಡೌಟ್ ಇದ್ದರೂ ನನ್ನನ್ನು ಸಂಪರ್ಕಿಸಬಹುದು. ನಾನು ಸ್ಪಷ್ಟೀಕರಣ ಕೊಡಲು ಸದಾ ಸಿದ್ಧನಿದ್ದೇನೆ ಎಂದ ಮಾಜಿ ಸಚಿವರು ತಿಳಿಸಿದ್ದಾರೆ.