ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟಿ ಕೋಟಿ ಬೆಲೆಬಾಳುವ ಮನೆ, ಐಷಾರಾಮಿ ಮನೆ ಎಲ್ಲದಕ್ಕೂ ಹೊಂದಿಕೊಂಡಿದ್ದ ಪವಿತ್ರಾ ಗೌಡ ಈಗ ನಾಲ್ಕು ಗೋಡೆಯ ಮಧ್ಯೆ ದಿನಕಳೆಯುತ್ತಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪವಿತ್ರಾ ಗೌಡ ಮತ್ತು ಇತರ 12 ಆರೋಪಿಗಳಿಗೆ ಬೆಂಗಳೂರು ಕೇಂದ್ರ ಕಾರಾಗೃಹದ ಅಧಿಕಾರಿಗಳು ಪರಪ್ಪನ ಅಗ್ರಹಾರದಲ್ಲಿರುವ ವಿಚಾರಣಾ ಕೈದಿ ಸಂಖ್ಯೆಗಳನ್ನು ನೀಡಿದ್ದಾರೆ.
ನಿನ್ನೆ ಯುಟಿಪಿ ಸಂಖ್ಯೆಗಳನ್ನು ನೀಡಲಾಗಿದ್ದು, ಪವಿತ್ರಾ ಗೌಡ ಯುಟಿಪಿ 6024 ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ 47 ವರ್ಷದ ದರ್ಶನ್ ತೂಗುದೀಪ ಸೇರಿದಂತೆ 17 ಜನರ ಪೈಕಿ ಪವಿತ್ರಾ ಏಕೈಕ ಮಹಿಳಾ ಆರೋಪಿಯಾಗಿದ್ದಾರೆ. ಆಕೆಯನ್ನು ಮಹಿಳಾ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಇತರ 11 ಆರೋಪಿಗಳನ್ನು ಪುರುಷ ಕೈದಿಗಳ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಪವಿತ್ರಾ ನಿದ್ದೆ ಇಲ್ಲದೆ ಒದ್ದಾಡಿದ್ದಾರೆ. ಜತೆಗೆ ಬೆಳಗ್ಗೆ ಐದು ಗಂಟೆಗೆ ಎದ್ದು ಜೈಲಿನಲ್ಲಿ ವಾಕಿಂಗ್ ಮಾಡಿದ್ದಾರೆ.