Sunday, September 25, 2022

Latest Posts

ಐದು ವರ್ಷದ ಒಳಗಿನ ಮಕ್ಕಳಿಗೆ ಟಿಕೆಟ್‌ ಅಗತ್ಯವಿಲ್ಲ: ರೈಲ್ವೆ ಇಲಾಖೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತೀಯ ರೈಲ್ವೆ ಇಲಾಖೆ ಐದು ವರ್ಷದ ಒಳಗಿನ ಮಕ್ಕಳಿಗೆ ಟಿಕೆಟ್‌ ಖರೀದಿಸಬೇಕಾಗಿಲ್ಲ. ಆದರೆ, ಪ್ರತ್ಯೇಕ ಬರ್ತ್‌ (ಸೀಟು) ಬೇಕು ಎಂದಾದರೆ, ಟಿಕೆಟ್‌ನ ಪೂರ್ತಿ ಹಣ ಪಾವತಿಸಬೇಕು ಎಂದು ಬುಧವಾರ ಸ್ಪಷ್ಟಪಡಿಸಿದೆ.
ಐದು ವರ್ಷದ ಒಳಗಿನ ಮಕ್ಕಳಿಗೂ ಟಿಕೆಟ್‌ ಖರೀದಿಸಬೇಕು ಎಂದು ಇಲಾಖೆ ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಐದು ವರ್ಷದ ಒಳಗಿನ ಮಕ್ಕಳಿಗೆ ಟಿಕೆಟ್‌ ಖರೀದಿ ಸಂಬಂಧ ಯಾವ ನಿಯಮವೂ ಬದಲಾಗಿಲ್ಲ’ಎಂದು ಇಲಾಖೆ ಹೇಳಿದೆ.
ಐದು ವರ್ಷದ ಮಕ್ಕಳಿಗೆ ಟಿಕೆಟ್‌ ಖರೀದಿಸಬೇಕಾಗಿಲ್ಲ. ಈ ಮಕ್ಕಳಿಗಾಗಿ ಪ್ರತ್ಯೇಕ ಬರ್ತ್‌ ನೀಡುವುದಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆಯು 2020ರ ಮಾರ್ಚ್‌ 6ರಂದು ಸೂತ್ತೋಲೆ ಹೊರಡಿಸಿತ್ತು. ಪ್ರತ್ಯೇಕ ಬರ್ತ್ ಬೇಕು ಎಂದಾದರೆ, ದೊಡ್ಡವರಿಗೆ ಇರುವ ಟಿಕೆಟ್‌ ದರವನ್ನೇ ಪಾವತಿ ಮಾಡಬೇಕು ಎಂದೂ ಸುತ್ತೋಲೆಯಲ್ಲಿ ಹೇಳಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!