ನಿತ್ಯ ಜಿಮ್‌ಗೆ ಹೋಗೋಕೆ ಟೈಮ್ ಇಲ್ಲ. ಮೋಟಿವೇಷನ್ ಕೂಡ ಇಲ್ಲ ಅಥವಾ ಹಣ ಇಲ್ಲವಾಗಿರಬಹುದು. ಇಂಥವರು ಮನೆಯಲ್ಲೇ ಇದ್ದು ತೂಕ ಇಳಿಸಿಕೊಳ್ಳಬಹುದು. ಅದರ ಜೊತೆಗೆ ಮಸಲ್ ಡೆವಲಪ್ ಮಾಡಿಕೊಳ್ಳಬಹುದು. ಮನೆಯಲ್ಲೇ ಅರ್ಧಗಂಟೆ ಈ ವರ್ಕೌಟ್ಸ್ ಮಾಡಿ..
1. ಸ್ಕ್ವಾಟ್ಸ್ ( Squats)
ಕೈಯಲ್ಲಿ ಡಂಬಲ್ ಹಿಡಿದು ಅಥವಾ ಹಾಗೆಯೇ ಕುಳಿತು ಏಳುವಂಥ ಸ್ಕ್ವಾಟ್ಸ್ ಮಾಡಿ
2. ಲಂಜಸ್ (lunges)
ನಿತ್ಯವೂ ಎರಡೂ ಕಾಲಿಗೂ ಲಂಜಸ್ ಮಾಡಿ. ಒಂದು ಕಾಲನ್ನು ಮುಂದೆ ಇಟ್ಟು ಬಗ್ಗಬೇಕು, ಹೀಗೆ ಎರಡೂ ಕಾಲಿಗೂ ಮಾಡಿ.
3. ಪುಷ್ ಅಪ್ಸ್ ( push ups)
ಇಡೀ ದೇಹಕ್ಕೆ ಸ್ಟ್ರೆಂತ್ ಬರಲು ಮಿಸ್ ಮಾಡದೆ ಪುಷ್ ಅಪ್ಸ್ ಮಾಡಿ, ನಿಮಗೆ ಎಷ್ಟು ಮಾಡಲು ಸಾಧ್ಯವೋ ಮಿಸ್ ಮಾಡದೆ ಅನ್ನು ಮಾಡಿ
4. ಡೆಡ್‌ಲಿಫ್ಟ್ಸ್ ( Deadlift)
ಕೈಯಲ್ಲಿ ಡಂಬಲ್ಸ್ ಅಥವಾ ಬಾರ್ ಹಿಡಿದುಕೊಂಡು ಬಗ್ಗಿ ಏಳಬೇಕು. ಇದನ್ನು ದಿನವೂ ಮಾಡಿ
5. ಶೋಲ್ಡರ್ ಪ್ರೆಸ್ (Shoulder press)
ಎರಡೂ ಕೈಯಲ್ಲಿ ಡಂಬಲ್ಸ್ ಹಿಡಿದು ಮೇಲೆ ಕೆಳಗೆ ಎತ್ತಬೇಕು. ಇದರಿಂದ ನಿಮ್ಮ ಶೋಲ್ಡರ್ ಸ್ಟ್ರಾಂಗ್ ಆಗುತ್ತದೆ.