September 21, 2026
Monday, September 21, 2026
spot_img

ರಾಯಲಸೀಮೆಯಲ್ಲಿ ಗಣಪತಿ ವಿಸರ್ಜನೆಗೂ ನೀರಿಲ್ಲ: ಬರಿದಾದ ಕೆರೆಯ ಒಡಲಿನಲ್ಲಿ ಅನಾಥವಾದ ಮೂರ್ತಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದ ರಾಯಲಸೀಮೆ ಪ್ರದೇಶದಲ್ಲಿ ಹನಿ ಮಳೆಯೂ ಬೀಳದೇ ಬರದ ಪರಿಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲಿಯೂ ಇಲ್ಲಿನ ಜನ ಗಣೇಶನ ಹಬ್ಬವನ್ನು ಶ್ರದ್ಧೆಯಿಂದ ಆಚರಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಊರಿನಲ್ಲಿ ಇಟ್ಟಿದ್ದ ಎಲ್ಲ ಗಣಪತಿ ಮೂರ್ತಿಗಳನ್ನು ಬತ್ತಿ ಹೋಗಿರುವ ಕೆರೆಯ ಮಧ್ಯಭಾಗದಲ್ಲಿ ತಂದು ಇಟ್ಟಿದ್ದಾರೆ. ನೀರಿನಲ್ಲಿ ಮುಳುಗಬೇಕಿದ್ದ ಗಣಪತಿ ದೇವರ ಮೂರ್ತಿ, ಈ ರೀತಿ ಒಣಗಿರುವ ನೆಲದಲ್ಲಿ ನಿಂತಿರುವ ದೃಶ್ಯ ಹೃದಯ ಕಲಕುವಂತಿದೆ.

ಪ್ರತಿಯೊಬ್ಬರೂ ಗಣೇಶನ ಮೂರ್ತಿಯಲ್ಲಿ ನೀರಿನಲ್ಲಿ ಮುಳುಗಿಸುತ್ತಾರೆ, ಸೇತುವೆಯಿಂದ ಎಸೆಯುತ್ತಾರೆ, ಕೆರೆಯಲ್ಲಿ ಹಾಕುತ್ತಾರೆ. ಆದರೆ ಈ ಭಾಗದಲ್ಲಿ ಎಲ್‌ನಿನೊ ಪರಿಣಾಮವಾಗಿ ನದಿಗಳು ಹಾಗೂ ಜಲಾಶಯಗಳು ಬತ್ತಿಹೋಗಿವೆ. ಅನಿವಾರ್ಯವಾಗಿ ಜನ ಕೆರೆಯ ಜಾಗದಲ್ಲಿ ಗಣಪನನ್ನು ಕೂರಿಸಿ ಮಳೆ ನೀಡು ಭಗವಂತಾ ಎಂದು ಬೇಡಿಕೊಂಡಿದ್ದಾರೆ.

ಗಣೇಶನನ್ನು ಬಿಟ್ಟು ಬಂದ ಕೆಲ ಸಮಯಕ್ಕೆ ಮಳೆ

ಇಲ್ಲಿನ ಸ್ಥಳೀಯರು ಗಣಪತಿಯನ್ನು ಬರದಂತಹ ಪ್ರದೇಶದಲ್ಲಿ ಬಿಟ್ಟು ಬಂದರೆ ದೇವರು ಮಳೆಯನ್ನು ಕರುಣಿಸುತ್ತಾನೆ ಎನ್ನುವ ನಂಬಿಕೆ ಇದೆ. ರಾಯಲಸೀಮೆಯ ಜನ ದೇವರನ್ನು ನದಿಯ ಮಧ್ಯಭಾಗದ ಖಾಲಿ ಜಾಗದಲ್ಲಿ ಬಿಟ್ಟು ಬಂದ ಗಂಟೆಗಳಲ್ಲೇ ಮಳೆ ಸುರಿದಿದೆ. ಕೆರೆ ಕಟ್ಟೆಗಳಲ್ಲಿ ನೀರು ಹರಿದಿದೆ. ಕೆಲವರು ಇದು ನಮ್ಮ ನಂಬಿಕೆ, ಪವಾಡ ಎಂದು ಹೇಳಿದರೆ, ಹಲವರು ಪ್ರತೀ ವರ್ಷ ಗಣಪತಿ ಹಬ್ಬದ ಸಮಯದಲ್ಲಿ ಮಳೆ ಬಂದೇ ಬರುತ್ತದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !