ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕಾಗಿ ಮಾಡಿದ ಪ್ರಯತ್ನಗಳಿಗಾಗಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಪಾಕಿಸ್ತಾನ್ ವಿಶ್ವ ಒಕ್ಕೂಟದ (PWA) ಸದಸ್ಯರು, ಕಳೆದ ಡಿಸೆಂಬರ್‌ನಲ್ಲಿ ಸ್ಥಾಪಿಸಲಾದ ವಕೀಲರ ಗುಂಪು, ನಾರ್ವೆಯ ರಾಜಕೀಯ ಪಕ್ಷವಾದ ಪಾರ್ಟಿಯೆಟ್ ಸೆಂಟ್ರಮ್ ಪಕ್ಷದವರು ಇಮ್ರಾನ್ ಖಾನ್ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಈ ಕುರಿತು ಪಾರ್ಟಿಯೆಟ್ ಸೆಂಟ್ರಮ್ ಪಕ್ಷ ಎಕ್ಸ್ ತಾಣದಲ್ಲಿ, ”ಪಾರ್ಟಿಯೆಟ್ ಸೆಂಟ್ರಮ್ ಪರವಾಗಿ ನಾವು ಸಂತೋಷದಿಂದ ಹೇಳಿಕೊಳ್ಳುತ್ತಿದ್ದೇವೆ ಅದು ಏನಂದರೆ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕಾಗಿ ಮಾಡಿದ ಕೆಲಸಕ್ಕಾಗಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ” ಎಂದು ಪೋಸ್ಟ್ ಮಾಡಿದೆ.