Wednesday, November 29, 2023

Latest Posts

ಪ್ಯಾಲೇಸ್ಟೈನ್ನರಿಗೆ ₹2.5 ಕೋಟಿ ರೂ ದೇಣಿಗೆ ನೀಡುವುದಾಗಿ ಘೋಷಿಸಿದ ಮಲಾಲಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗಾಜಾದ ಆಸ್ಪತ್ರೆ ಮೇಲೆ ನಡೆದ ಭೀಕರ ದಾಳಿಯ ಕುರಿತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ಯಾಲೇಸ್ಟೈನ್‌ ಜನರಿಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ 3 ಲಕ್ಷ ಡಾಲರ್ (ರೂ. 2.5 ಕೋಟಿ) ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಮಲಾಲಾ, ‘ಗಾಜಾ ನಗರದ ಅಲ್‌-ಅಲ್ಹಿ ಆಸ್ಪತ್ರೆ ಮೇಲೆ ನಡೆದ ಬಾಂಬ್‌ ದಾಳಿಯಿಂದ ನಾನು ಗಾಬರಿಗೊಂಡಿದ್ದೇನೆ. ಈ ದಾಳಿಯನ್ನು ನಾನು ಖಂಡಿಸುತ್ತೇನೆ. ಗಾಜಾಕ್ಕೆ ಮಾನವೀಯ ನೆರವು ನೀಡಲು ಮತ್ತು ಕದನ ವಿರಾಮಕ್ಕೆ ಕರೆ ನೀಡಲು ಇಸ್ರೇಲ್ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನಾನು ಪ್ಯಾಲೆಸ್ತೀನ್‌ ಜನರಿಗೆ ಸಹಾಯ ಮಾಡುತ್ತಿರುವ ಮೂರು ಸಂಸ್ಥೆಗಳಿಗೆ 2.5 ಕೋಟಿ ರೂ. ದೇಣಿಗೆ ನೀಡುತ್ತೇನೆ. ಸಾಮಾನ್ಯ ಜನರ ಮೇಲೆ ಹಲ್ಲೆ ನಡೆಯುತ್ತಿದೆ, ಇದು ತಪ್ಪುʼ ಎಂದು ಮಲಾಲಾ ಧ್ವನಿ ಎತ್ತಿದ್ದಾರೆ.

ಗಾಜಾದ ಅಲ್‌-ಅಲ್ಹಿ ಆಸ್ಪತ್ರೆ ಮೇಲೆ ಇಸ್ರೇಲ್‌ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!