ಹೊಸದಿಗಂತ ಡಿಜಿಟಲ್ ಡೆಸ್ಕ್:
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗ್ತಾರೆ. ಇದನ್ನು ಯಾರಿಂದಲೂ ತಡೆಯೋದಕ್ಕೆ ಆಗೋದಿಲ್ಲ ಎಂದು ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ನಮಗೆ ಖುಷಿ ನೀಡಿದೆ. ಸೀಟು ಹಂಚಿಕೆಯಲ್ಲೂ ನಮ್ಮ ಮಧ್ಯೆ ಯಾವ ಸಮಸ್ಯೆಯೂ ಬಂದಿಲ್ಲ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು ಅನ್ನೋದು ನಮ್ಮ ಆಶಯ. ಎಲ್ಲ ಪಕ್ಷಗಳಲ್ಲೂ ಇರುವಂತೆ ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇವೆ. ಆದರೆ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತಿದ್ದೇವೆ.
ಇನ್ನು ಪ್ರಧಾನಿ ಮೋದಿಗೆ ಜನಮನ್ನಣೆ ಇದೆ, ಜನರ ಆಶೀರ್ವಾದ ಅವರೊಂದಿಗಿರುವ ಕಾರಣ ಅವರೇ ಈ ಬಾರಿ ಕೂಡ ಪ್ರಧಾನಿ ಆಗುತ್ತಾರೆ ಎಂದಿದ್ದಾರೆ.