ಹೊಸದಿಗಂತ ವರದಿ,ಮಂಡ್ಯ :
ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಕೈಗಾರಿಕೋದ್ಯಮಿಗಳು ಬಂಡವಾಳ ಹಾಕಲು ಮುಂದೆ ಬಂದಿದ್ದಾರೆ. ಆದರೆ ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಇಲ್ಲದಂತಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನಡೆದ ಮಂಡ್ಯ ಟು ಇಂಡಿಯಾ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮತನಾಡಿದ ಅವರು, ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆಸಕ್ತಿ ತೋರಿದ್ದಾರೆ. ಆದರೆ ರಾಜ್ಯ ಸರ್ಕಾರವೂ ಈ ಬಗ್ಗೆ ಒತ್ತು ನೀಡಬೇಕು. ಈವರೆವಿಗೂ ರಾಜ್ಯದ ಯಾವುದೇ ಸಚಿವರು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಿಲ್ಲ ಎಂದು ದೂರಿದರು.
ಕೇಂದ್ರ ಸಚಿವರು ದೆಹಲಿಯಲ್ಲಿ ಇದ್ದು ಕೆಲಸ ಮಾಡಲಿ ಎಂದು ಹೇಳುತ್ತಾರೆ. ನಾನು ಇಲ್ಲಿಗೆ ಬರದಿದ್ದರೆ ಮಂಡ್ಯಕ್ಕೆ ಬರುವುದೇ ಇಲ್ಲ ಎಂದು ಆರೋಪಿಸುತ್ತಾರೆ. ಇಂತಹ ಸಣ್ಣತನ ಬಿಟ್ಟು ಕೈಗಾರಿಕಾ ಉದ್ಯಮಗಳನ್ನು ರಾಜ್ಯದಲ್ಲಿ ತರಲು ಹೊರಟಾಗ ರಾಜ್ಯ ಸರ್ಕಾರದ ಸಹಕಾರವೂ ಅತ್ಯಗತ್ಯ ಎಂದರು.