ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದಲ್ಲಿ ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಂಟು ಮಂದಿ ಮದ್ಯದ ಅಮಲಿನಲ್ಲಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಆಗಸ್ಟ್ 12 ರಂದು ರಾಯಗಢ್‌ನ ಪುಸೌರ್ ಪ್ರದೇಶದ ಗ್ರಾಮದ ಬಳಿ ರಕ್ಷಾಬಂಧನವನ್ನು ಆಚರಿಸಿದ ನಂತರ ಸ್ಥಳೀಯ ಜಾತ್ರೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ರಾಯಗಢಕ್ಕೆ ಹೋಗುತ್ತಿದ್ದಾಗ ಎಂಟು ಮಂದಿ ಆಕೆಯನ್ನು ಅಪಹರಿಸಿ ಬಲವಂತವಾಗಿ ಸಮೀಪದ ಕೊಳದ ಬಳಿ ಕರೆದೊಯ್ದು ಐದು ಗಂಟೆಗಳ ಕಾಲ ಅತ್ಯಾಚಾರವೆಸಗಿದ್ದಾರೆ. ಘಟನೆಯ ನಂತರ, ಮಹಿಳೆ ಹೇಗೋ ತನ್ನ ಮನೆಗೆ ತಲುಪಿ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದಳು, ನಂತರ ಪೊಲೀಸರಿಗೆ ದೂರು ನೀಡಲಾಯಿತು.