ʼಬೆಂಗಳೂರು ನಮ್ದು, ನೀನೇ ಹಿಂದಿ ಮಾತಾಡುʼ ಎಂದಿದ್ದ ನಾರ್ತ್‌ ಇಂಡಿಯನ್ ಕನ್ನಡದಲ್ಲೇ ಕ್ಷಮೆಯಾಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಿಂದಿ ಮಾತನಾಡುವ ನಾರ್ತ್‌ ಇಂಡಿಯನ್‌ ಹಾಗೂ ಕನ್ನಡದ ಆಟೋ ಡ್ರೈವರ್‌ ಮಧ್ಯೆ ನಡೆದ ಮಾತುಕತೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಕನ್ನಡದ ಆಟೋ ಡ್ರೈವರ್‌ಗೆ ಬೆಂಗಳೂರು ನಮ್ಮದು ನೀನೇ ಕನ್ನಡ ಕಲಿ ಎಂದು ಅವಾಝ್‌ ಹಾಕಿದ್ದ ವ್ಯಕ್ತಿ ಇದೀಗ ನಮ್ಮ ಭಾಷೆಯಲ್ಲೇ ಕ್ಷಮೆ ಕೇಳಿದ್ದಾರೆ.

ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಕನ್ನಡಿಗ ಆಟೋ ಚಾಲಕನಿಗೆ ಧಮ್ಕಿ ಹಾಕಿದ್ದ ಹಿಂದಿ ಭಾಷಿಕ ಇದೀಗ ಕನ್ನಡಿಗರ ಕ್ಷಮೆ ಕೋರಿದ್ದಾನೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಹಿಂದಿ ಭಾಷಿಕ ಕನ್ನಡದಲ್ಲೇ ಮಾತನಾಡಿ ಕ್ಷಮೆ ಯಾಚಿಸಿದ್ದು, ನಾನು ಬಳಸಿದ ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾನೆ.

ಮೊದಲಿಗೆ ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಕನ್ನಡ ಜನರಿಗೆ ನಾನು ಕ್ಷಮೆ ಯಾಚಿಸುತ್ತೇನೆ. ನಾನು ಕಳೆದ 9 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ಈ ಸುಂದರ ನಗರದ ಭಾಗವಾಗಿದ್ದೇನೆ. ಈ ನಗರದ ಜೊತೆ ನನ್ನ ಸಾಕಷ್ಟು ಭಾವನಾತ್ಮಕ ಕ್ಷಣಗಳಿವೆ. ಬೆಂಗಳೂರು ನನಗೆ ಜೀವನ ಕೊಟ್ಟಿದೆ.

ಹೀಗಾಗಿ ಈ ನಗರದ ಬಗ್ಗೆ ಅತೀವ ಗೌರವವಿದೆ. ನಾನು ಇಲ್ಲಿದ್ದುಕೊಂಡೇ ಹೊರಗಿನ ದೇಶದ ಕಂಪನಿಗೆ ಕೆಲಸ ಮಾಡುತ್ತಿದ್ದೇನೆ, ಅಲ್ಲಿಂದಲೇ ನನಗೆ ಸಂಬಳ ಬರುತ್ತದೆ. ನನಗೆ ಈ ಬೆಂಗಳೂರು ತುಂಬಾ ಇಷ್ಟ. ಕನ್ನಡಿಗರಿಗೆ ನಾನಾಡಿರುವ ಮಾತುಗಳಿಂದ ನೋವಾಗಿದ್ದರೆ ನಾನು ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ. ಈಗಾಗಲೇ ನಾನು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಕ್ಷಮೆ ಕೋರಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here