ಬೆಳ್ಳಂಬೆಳಗ್ಗೆ ಕ್ರೂಸ್ ಕ್ಷಿಪಣಿಗಳ ಸರಣಿ ಉಡಾವಣೆ: ಉದ್ವಿಗ್ನತೆ ಹೆಚ್ಚಿಸಿದ ಉತ್ತರ ಕೊರಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಮುಂಜಾನೆ ಹಲವು ಕ್ರೂಸ್‌ ಕ್ಷಿಪಣಿಗಳನ್ನು ಹಾರಿಸಿ ಉತ್ತರ ಕೊರಿಯಾ ಮತ್ತಷ್ಟು ಉದ್ವಿಗ್ನತೆಯನ್ನು ಸೃಷ್ಟಿಮಾಡಿದೆ. ಶನಿವಾರ ಬೆಳ್ಳಂಬೆಳಗ್ಗೆ ಕೊರಿಯನ್ ಪೆನಿನ್ಸುಲಾದ ಪಶ್ಚಿಮದ ಸಮುದ್ರಕ್ಕೆ ಹಲವು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿರುವುದಾಗಿ ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಸ್ಪಷ್ಟಪಡಿಸಿದರು.

ಇಂದು ಮುಂಜಾನೆ 4ಗಂಟೆಗೆ ಉತ್ತರ ಕೊರಿಯಾ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ದೃಢಪಡಿಸಿದೆ. ಬುಧವಾರ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದ ನಂತರ, ಉತ್ತರ ಕೊರಿಯಾ ಮತ್ತೆ ಸಮುದ್ರದ ಮೇಲೆ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿತು.

ಅಮೆರಿಕದ ಪರಮಾಣು ಶಸ್ತ್ರಸಜ್ಜಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ದಕ್ಷಿಣ ಕೊರಿಯಾಕ್ಕೆ ಆಗಮಿಸಿದಾಗಿನಿಂದ ಉತ್ತರ ಕೊರಿಯಾ ಕ್ಷಿಪಣಿಗಳನ್ನು ಹಾರಿಸುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಯುಎಸ್ ವಿಮಾನವಾಹಕ ನೌಕೆಗಳು, ಬಾಂಬರ್‌ಗಳು ಮತ್ತು ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳ ನಿಯೋಜನೆಯು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಮಾನದಂಡಗಳನ್ನು ಪೂರೈಸುತ್ತದೆ ಎಂದು ಉತ್ತರ ಕೊರಿಯಾ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!