ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡುತ್ತಿದೆ, ಒಂದು ವಾರದಲ್ಲಿ ಮೂರನೇ ಬಾರಿಗೆ ಕ್ಷಿಪಣಿ ಪರೀಕ್ಷೆ ನಡೆಸಿದೆ.
ಇಂದು ಬೆಳಗ್ಗೆ ಮತ್ತೊಂದು ಖಂಡಾಂತರ ಕ್ಷಿಪಣಿಯನ್ನು ಉತ್ತರ ಕೊರಿಯಾ ಉಡಾವಣೆ ಮಾಡಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 7:10 ಕ್ಕೆ ಪ್ಯೋಂಗ್‌ಯಾಂಗ್‌ನಿಂದ ಉಡಾವಣೆ ಮಾಡಲಾಗಿದೆ. ಕೊರಿಯನ್ ಪರ್ಯಾಯ ದ್ವೀಪದ ಪೂರ್ವಭಾಗದಲ್ಲಿ ಸಮುದ್ರ ವಲಯಕ್ಕೆ ಕ್ಷಿಪಣಿ ಉಡಾವಣೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ.
ಉತ್ತರ ಕೊರಿಯಾ ಒಂದು ವಾರದಲ್ಲಿ ಮೂರನೇ ಬಾರಿ ಕ್ಷಿಪಣಿ ಪರೀಕ್ಷೆ ನಡೆಸಿದೆ. ನಾಲ್ಕು ದಿನಗಳ ಹಿಂದೆ ಕಿಮ್ ಜಲಾಂತರ್ಗಾಮಿ ನೌಕೆಯಿಂದ ಎರಡು ಕ್ಷಿಪಣಿಗಳನ್ನು ಪರೀಕ್ಷಿಸಲಾಗಿತ್ತು.