ಜಗತ್ತಿಗೇ ಕಂಪನ ಉಂಟುಮಾಡಿದೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

5,500 ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನೂ ಉಡಾಯಿಸಬಲ್ಲ ಕ್ಷಿಪಣಿಯೊಂದನ್ನು ಉತ್ತರ ಕೊರಿಯಾ ಪರೀಕ್ಷಿಸಿದೆ.

ಕಿಮ್ ಜಾಂಗ್ ಉಂಗ್ ಎಂಬ ಸರ್ವಾಧಿಕಾರಿ ಆಡಳಿತದಲ್ಲಿರುವ ಉತ್ತರ ಕೊರಿಯಾದಿಂದ ಜಗತ್ತಿಗೆ ಭದ್ರತಾ ಆತಂಕ ಒಡ್ಡುವ ಸುದ್ದಿಗಳು ಬರುತ್ತಲೇ ಇರುತ್ತವೆ. ಕಳೆದ ಐದು ವರ್ಷಗಳಿಂದ ಥರಹೇವಾರಿ ಕ್ಷಿಪಣಿಗಳನ್ನು ಪರೀಕ್ಷಿಸುವುದರಲ್ಲಿ ಉತ್ತರ ಕೊರಿಯಾ ನಿರತವಾಗಿತ್ತು. ಇದೀಗ ಪರೀಕ್ಷೆಗೆ ಒಳಪಡಿಸಿರುವುದು ಅತಿ ದೂರದ ವ್ಯಾಪ್ತಿ ಹೊಂದಿರುವ ಕ್ಷಿಪಣಿಯಾಗಿದೆ.

ವಿಶ್ವಸಂಸ್ಥೆಯ ನಿರ್ಣಯಕ್ಕೆ ವಿರುದ್ಧವಾಗಿ ಈ ದೇಶ ಅದಾಗಲೇ ಹೈಪರ್ಸೋನಿಕ್ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಾರ್ಥ ಪ್ರಯೋಗಗಳನ್ನೂ ನಡೆಸಿಬಿಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!