ರಷ್ಯ ಮೇಲೆ ಆರ್ಥಿಕ ದಿಗ್ಭಂಧನ ಬಿಗಿಗೊಳಿಸುವತ್ತ ಅಮೆರಿಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ನಲ್ಲಿ ಯುದ್ಧಬೀತಿ ಸೃಷ್ಟಿಸುತ್ತಿದೆ ಎಂಬ ಕಾರಣಕ್ಕೆ ರಷ್ಯದ ವಿರುದ್ಧ ಆರ್ಥಿಕ ನಿಯಂತ್ರಣಗಳನ್ನು ಹೇರುವ ಮಸೂದೆಯೊಂದನ್ನು ಅಮೆರಿಕ ಸಿದ್ಧಗೊಳಿಸುತ್ತಿದೆ.

ಅಮೆರಿಕದ ಈ ನಿರ್ಧಾರಕ್ಕೆ ಬ್ರಿಟನ್ ಸಹ ದೊಡ್ಡಮಟ್ಟದಲ್ಲಿ ರಷ್ಯ ಮೇಲೆ ಆರ್ಥಿಕ ದಿಗ್ಭಂಧನ ಬಿಗಿಗೊಳಿಸುವತ್ತ ಅಮೆರಿಕಕೈಜೋಡಿಸಿದೆ. ಉಕ್ರೇನ್ ಮಿಲಿಟರಿಗೆ ಆರ್ಥಿಕವಾಗಿ ಸಹಾಯ ಮಾಡುವ ಕ್ರಮಗಳೂ ಇದರಲ್ಲಿ ಸೇರಿವೆ.

ಅಮೆರಿಕ ಮತ್ತು ಬ್ರಿಟನ್ ಬಹಳ ಮುಖ್ಯವಾಗಿ ರಷ್ಯದ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಮೇಲೆ ಪ್ರತಿಬಂಧ ಹೇರಲಿವೆ. ವ್ಲಾಡಿಮಿರ್ ಪುಟಿನ್ ಅವರಿಗೆ ಆಪ್ತರಾಗಿರುವ ಶ್ರೀಮಂತ ಉದ್ಯಮಿಗಳು ಹಾಗೂ ಹಣಕಾಸು ವಲಯದ ವ್ಯಕ್ತಿಗಳ ಮೇಲೂ ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ನಿಯಂತ್ರಣಗಳನ್ನು ಹೇರಿ ಅವರು ಜಗತ್ತಿನ ಇತರ ದೇಶಗಳೊಂದಿಗೆ ವ್ಯವಹರಿಸುವುದನ್ನು ಕಷ್ಟವಾಗಿಸುವ ಮೂಲಕ ರಷ್ಯವನ್ನು ಹಣಿಯುವುದಕ್ಕೆ ಅಮೆರಿಕ ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!