Saturday, July 2, 2022

Latest Posts

ಜಪಾನ್‌ ಜಲಪ್ರದೇಶದಲ್ಲಿ ಬಿದ್ದ ಉತ್ತರ ಕೊರಿಯಾದ ಬೃಹತ್‌ ಖಂಡಾಂತರ ಕ್ಷಿಪಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಉತ್ತರ ಕೊರಿಯಾವು ಗುರುವಾರ ಹೊಸ ಮಾದರಿಯ ಬೃಹತ್‌ ಖಂಡಾಂತರ ಕ್ಷಿಪಣಿಯ ಉಡಾವಣಾ ಪ್ರಯೋಗ ನಡೆಸಿದ್ದು, ಅದು ಜಪಾನ್‌ನ ಜಲಪ್ರದೇಶದಲ್ಲಿ ಬಂದು ಬಿದ್ದಿದೆ.
ಸರ್ವಾಧಿಕಾರಿ ಕಿಮ್‌ ಜಾನ್‌ ಉನ್‌ ನೇತೃತ್ವದ ಉತ್ತರ ಕೊರಿಯಾವು 2017ರಲ್ಲಿ ದೇಶದಲ್ಲಿ ಖಂಡಾಂತರ ಕ್ಷಿಪಣಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ನಂತರ ಇದೇ ಮೊದಲಬಾರಿಗೆ ಇಷ್ಟೊಂದು ಬೃಹತ್ ಪ್ರಮಾಣದ ಖಂಡಾಂತರ ಕ್ಷಿಪಣಿ ಪ್ರಯೋಗಕ್ಕೆ ಮುಂದಾಗಿದ್ದು, 1110 ಕಿಲೋಮೀಟರ್‌ ದೂರ ಹಾರಿರುವ ಕ್ಷಿಪಣಿ ಜಪಾನ್‌ ದೇಶದ ಹೊಕ್ಕೈಡೋ ದ್ವೀಪ ಸಮೂಹ ವ್ಯಾಪ್ತಿಯ ಸಮುದ್ರಭಾಗದಲ್ಲಿ ಬಿದ್ದು ಸ್ಫೋಟಗೊಂಡಿದೆ.
ಉತ್ತರ ಕೊರಿಯಾದ ಪೂರ್ವ ಕರವಳಿಯಿಂದ ಉಡಾವಣೆಗೊಂಡ ಕ್ಷಿಪಣಿಯು 71 ನಿಮಿಷಗಳ ಕಾಲ ಹಾರಾಟ ನಡೆಸಿ ಜಪಾನ್‌ ನ ಜಲಭಾಗಕ್ಕೆ ಬಂದು ಬಿದ್ದಿದೆ. ಉತ್ತರ ಕೊರಿಯಾವು 2017 ರಲ್ಲಿ ಉಡಾವಣೆ ಮಾಡಿದ್ದ ಹ್ವಾಸಾಂಗ್ -15 ಕ್ಷಿಪಣಿಗಿಂತ ಈ ಕ್ಷಿಪಣಿಯು ಹೆಚ್ಚು ಶಕ್ತಿಯುತವಾಗಿದೆ. ಆ ಕ್ಷಿಪಣಿಯು 950 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದ್ದರೆ, ಗುರುವಾರ ಉಡಾಯಿಸಿದ ಕ್ಷಿಪಣಿಯು 6,200 ಕಿಮೀ ದೂರ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಜಪಾನ್‌ ರಕ್ಷಣಾ ಸಚಿವಾಲಯ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಪಾನ್‌ ಪ್ರಧಾನಿ ಫ್ಯೂಮೋ ಕಿಶಿದಾ, ಉತ್ತರ ಕೊರಿಯಾವು ದೇಶದ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ. ಆ ದೇಶದ ನಡೆಯನ್ನು ಜಪಾನ್‌ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ. ಈ ಬೆನ್ನಲ್ಲೇ ಉತ್ತರ ಕೋರಿಯಾದ ಬದ್ದ ವೈರತ್ವ ಹೊಂದಿರುವ ರಾಷ್ಟ್ರವಾದ ದಕ್ಷಿಣಾ ಕೊರಿಯಾವು ತನ್ನ ಸೇನೆಗೆ ಸನ್ನದ್ಧವಾಗಿರಲು ಸೂಚಿಸಿದೆ. ಮತ್ತು ಸಮರಾಭ್ಯಾಸಕ್ಕೆ ಸೂಚನೆ ನೀಡಿದೆ. ಉತ್ತರ ಕೊರಿಯಾ ಸತತ ಕ್ಷಿಪಣಿಗಳನ್ನು ಉಡಾಯಿಸಿ ನೆರೆರಾಷ್ಟ್ರಗಳ ಭದ್ರತೆಗೆ ಬೆದರಿಕೆ ಒಡ್ಡಿದ್ದ ಕಾರನದಿಂದ ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಆ ದೇಶದ ಮೇಲೆ 2017ರಲ್ಲಿ ನಿರ್ಬಂಧಗಳನ್ನು ಹೇರಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss