ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮಂಗಳವಾರ ಮುಂಜಾನೆ ಶಸ್ತ್ರಸಜ್ಜಿತ ರೈಲಿನಲ್ಲಿ ರಷ್ಯಾಕ್ಕೆ ತೆರಳಿದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಶಸ್ತ್ರಾಸ್ತ್ರ ಮಾರಾಟದ ಕುರಿತು ಕಿಮ್ ಜಾಂಗ್-ಉನ್ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ ಎಂದು ಉತ್ತರ ಕೊರಿಯಾ ರಕ್ಷಣಅಧಿಕಾರಿಗಳು ಬರಂಗಪಡಿಸಿದರು. ಉಕ್ರೇನ್‌ನಲ್ಲಿ ಮಾಸ್ಕೋದ ಯುದ್ಧಕ್ಕಾಗಿ ಪುಟಿನ್ ಉತ್ತರ ಕೊರಿಯಾದಿಂದ ಫಿರಂಗಿ ಶೆಲ್‌ಗಳು ಮತ್ತು ಟ್ಯಾಂಕ್ ವಿರೋಧಿ ಕ್ಷಿಪಣಿಗಳಮ್ಮು ಬಯಸಿದ್ದಾರೆಂಬ ವರದಿಗಳು ಬಂದಿದ್ದವು.
ಕಿಮ್, ತಮ್ಮ ಸೈನಿಕರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ರಷ್ಯಾಕ್ಕೆ ಪ್ರಯಾಣ ಬೆಳೆಸಿರುವುದಾಗಿ ಉತ್ತರ ಕೊರಿಯಾದ ಮೂಲಗಳು ತಿಳಿಸಿವೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಕಿಮ್ ಯಾವುದೇ ದೇಶಕ್ಕೆ ಪ್ರಯಾಣಿಸಿರಲಿಲ್ಲ.
ಉಕ್ರೇನ್‌ನಲ್ಲಿನ ಯುದ್ಧಕ್ಕಾಗಿ ಮಾಸ್ಕೋಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದರೆ ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್ ಬೆಲೆ ತೆರಬೇಕಾಗುತ್ತದೆ ಎಂದು ಶ್ವೇತಭವನ ಈಗಾಗಲೇ ಎಚ್ಚರಿಸಿದೆ. ಅಂತರರಾಷ್ಟ್ರೀಯ ಪ್ರಯಾಣಕ್ಕೆ ಬಂದಾಗ ಕಿಮ್ ರೈಲಿನಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಾರೆ. ಅವರ ತಂದೆ ಕಿಮ್ ಜೊಂಗ್ ಇಲ್ ಅವರು ವಿಮಾನ ಪ್ರಯಾಣಕ್ಕೆ ಹೆದರುತ್ತಿದ್ದರಂತೆ.