ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದಿಗಂತ್ಗೆ ಈ ವರ್ಷ ತುಂಬಾನೇ ಲಕ್ಕಿಯಾಗಿದೆ. ಬ್ಯಾಚುಲರ್ ಪಾರ್ಟಿ ಹಾಗೂ ಮಾರಿಗೋಲ್ಡ್ ಸಿನಿಮಾ ರಿಲೀಸ್ ಆಗಿದ್ದು, ತಕ್ಕ ಮಟ್ಟಿಗೆ ಹೆಸರು ಮಾಡಿದೆ.
ಇಷ್ಟು ದಿನ ಪ್ರತೀ ಸಿನಿಮಾಗಳಲ್ಲಿ ದೂದ್ ಪೇಡದಂತೆ ಸ್ವೀಟ್ ಆಂಡ್ ಕ್ಯೂಟ್ ಆಗಿ ಕಾಣ್ತಿದ್ದ ದಿಗಂತ್ ಇದೀಗ ಡಾಲಿ ಸಿನಿಮಾ ಉತ್ತರಾಖಂಡದಲ್ಲಿ ವಿಶೇಷ ಪಾತ್ರದಲ್ಲಿ ರಗಡ್ ಆಗಿ ಕಾಣಿಸಲಿದ್ದಾರೆ.
ಡಾಲಿ ಧನಂಜಯ್, ಶಿವಣ್ಣ, ರಮ್ಯಾ ನಟನೆಯ ಸಿನಿಮಾದಲ್ಲಿ ದಿಗಂತ್ ಮಿರ್ಚಿ ಮಲ್ಲಿಗೆ ಎನ್ನುವ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಕೆಆರ್ಜಿ ಸ್ಟುಡಿಯೋಸ್ ಪೋಸ್ಟ್ ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ.
View this post on Instagram