KIDS SPL | ಚಾಕಲೇಟ್ ಅಂದ್ರೆ ಮಕ್ಕಳಿಗೆ ಸಕತ್ ಇಷ್ಟ, ಚಾಕಲೇಟ್ ‘ಸ್ಯಾಂಡ್‌ವಿಚ್’ ಮಾಡಿಕೊಟ್ರೆ ಫುಲ್ ಫಿದಾ ಆಗ್ತಾರೆ!

ಸಂಜೆ ಟೀ ಜೊತೆ ಸ್ಯಾಂಡ್ ವಿಚ್ ತಿಂದರೆ ಸಿಗುವ ಖುಷಿಯೇ ಬೇರೆ. ಮಕ್ಕಳಿಗೂ ಇಷ್ಟವಾಗುವ ಸರಳವಾದ ಚಾಕೊಲೇಟ್ ಸ್ಯಾಂಡ್ವಿಚ್ ಅನ್ನು ಹೀಗೆ ಮಾಡಿ.

ಬ್ರೇಡ್- 4 ಸೈಸ್,
ಚಾಕೋಚಿಪ್ಸ್- 2 ಟೇಬಲ್ ಸ್ಪೂನ್,
ಬೆಣ್ಣೆ- 2 ಟೇಬಲ್ ಸ್ಪೂನ್
ಚಾಕೋಚಿಪ್ಸ್ ಇಲ್ಲದಿದ್ದರೆ ಡಾರ್ಕ್ ಚಾಕೋಲೆಟ್ ಬಳಸಿಕೊಳ್ಳಿ

ಮೊದಲಿಗೆ ಬ್ರೆಡ್ ಗೆ ಬೆಣ್ಣೆಯನ್ನು ಒಂದು ಚಾಕುವಿನ ಸಹಾಯದಿಂದ ಚೆನ್ನಾಗಿ ಹಚ್ಚಿ. ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಹಾಕಿ. ಅದು ಕರಗಿದ ಮೇಲೆ ಪ್ಯಾನ್ ಮೇಲೆ 2 ಪೀಸ್ ಬ್ರೆಡ್ ಇಟ್ಟು ಅದರ ಮೇಲೆ ಚಾಕೋಚಿಪ್ಸ್ ಅನ್ನು ಹಾಕಿ ಇನ್ನೊಂದು ಬ್ರೆಡ್ ಅದರ ಮೇಲೆ ಇಟ್ಟು ಬೆಣ್ಣೆ ಹಚ್ಚಿ.

ಸಣ್ಣ ಉರಿಯಲ್ಲಿ ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ. ಟೀ – ಕಾಫಿ ಜತೆ ಸವಿಯಲು ಚೆನ್ನಾಗಿರುತ್ತದೆ. ಚಾಕೋಲೆಟ್ ಚಿಪ್ಸ್ ಹಾಕಿರುವುದರಿಂದ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಸಂಜೆಯ ಸ್ಯಾಕ್ಸ್ ಗೆ ಹೇಳಿಮಾಡಿಸಿದ್ದ ತಿಂಡಿ ಇದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!