August 26, 2026
Wednesday, August 26, 2026
spot_img

ಹಣ ಸಾಕಾಗ್ತಿಲ್ಲ: ಅಯೋಧ್ಯೆಯಲ್ಲಿ ಭವ್ಯ ಮಸೀದಿ ಕಟ್ಟೋ ಆಸೆ ಕೈಬಿಟ್ಟ ಇಂಡೋ-ಇಸ್ಲಾಮಿಕ್ ಟ್ರಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಮಹತ್ವಾಕಾಂಕ್ಷೆಯ ಮಸೀದಿ ಯೋಜನೆಗೆ ಆರ್ಥಿಕ ಸವಾಲು ಎದುರಾಗಿದೆ.

ನಿರೀಕ್ಷಿತ ಮಟ್ಟದಲ್ಲಿ ದೇಣಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ತನ್ನ ಮೂಲ ಯೋಜನೆಯಲ್ಲಿ ಬದಲಾವಣೆ ಮಾಡಿ, ಕಡಿಮೆ ವೆಚ್ಚದ ಮಸೀದಿ ನಿರ್ಮಾಣಕ್ಕೆ ಮುಂದಾಗಿದೆ.

ದೇಣಿಗೆ ಕೊರತೆಯಿಂದ ಯೋಜನೆಗೆ ಬದಲಾವಣೆ

ಮಸೀದಿ, ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡುಗೆಮನೆ ಸೇರಿದಂತೆ ಹಲವು ಸಾರ್ವಜನಿಕ ಸೌಲಭ್ಯಗಳನ್ನು ಒಳಗೊಂಡ ಯೋಜನೆಗೆ ಸುಮಾರು 300 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದುವರೆಗೆ ಕೇವಲ 1.5 ಕೋಟಿ ರೂ ದೇಣಿಗೆ ಮಾತ್ರ ಸಂಗ್ರಹವಾಗಿರುವುದರಿಂದ ಟ್ರಸ್ಟ್ ಯೋಜನೆಯ ಗಾತ್ರವನ್ನು ಮರುಪರಿಶೀಲಿಸಿದೆ.

ಇದನ್ನೂ ಓದಿ:

ಸಣ್ಣ ಮಸೀದಿ ನಿರ್ಮಾಣಕ್ಕೆ ಆದ್ಯತೆ

ಹೊಸ ಯೋಜನೆಯಂತೆ ಸುಮಾರು 3 ಕೋಟಿ ವೆಚ್ಚದಲ್ಲಿ ಮಸೀದಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಅಗತ್ಯ ಹಣಕಾಸು ಲಭ್ಯವಾದ ಬಳಿಕ ಮುಂದಿನ ಹಂತದಲ್ಲಿ ಅವುಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಯೋಜನೆಯ ಮೂಲ ಉದ್ದೇಶವನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿದಿದ್ದರೂ, ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಟ್ರಸ್ಟ್ ಮುಂದಾಗಿದೆ. ದೇಣಿಗೆ ಸಂಗ್ರಹ ಹೆಚ್ಚಾದರೆ ಉಳಿದ ಸೌಲಭ್ಯಗಳ ನಿರ್ಮಾಣಕ್ಕೂ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !