June 30, 2026
Tuesday, June 30, 2026
spot_img

ಎಲ್ಲರಿಗೂ ಒಮ್ಮೆಲೆ ಉನ್ನತ ಹುದ್ದೆ ಸಿಗೋದಿಲ್ಲ, ತಾಳ್ಮೆಯಿಂದ ಕಾಯುವವರಿಗೆ ಗೌರವ ಸಿಗುತ್ತದೆ: ಜಾರಕಿಹೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಕ್ಷದಲ್ಲಿ ಯಾರಿಗೂ ಅನ್ಯಾಯ ಆಗೋದಿಲ್ಲ. ಒಂದೇ ಕ್ಷಣಕ್ಕೆ ಯಾರಿಗೂ ಉನ್ನತ ಹುದ್ದೆಯೂ ಸಿಗೋದಿಲ್ಲ. ತಾಳ್ಮೆಯಿಂದ ಕಾದರೆ ಗೌರವ ಗಳಿಸುತ್ತೀರಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಮತ್ತು ಪಕ್ಷದ ಪ್ರಮುಖ ಹುದ್ದೆಗಳ ನೇಮಕಾತಿ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇದೆ ಎನ್ನುವ ಸುದ್ದಿಗಳು ಬಿತ್ತರಿಸುತ್ತಿವೆ. ಈ ಹಿನ್ನೆಲೆ ಮಾತನಾಡಿದ್ದು, ನ್ಯಾಯ ಸಿಕ್ಕಿಲ್ಲ ಅನ್ನೋ ಪ್ರಶ್ನೆಯೇ ಇಲ್ಲ. ಎಲ್ಲವೂ ಒಂದೇ ಸಮಯದಲ್ಲಿ ಆಗೋದಿಲ್ಲ. ಆಗಿರುವುದಕ್ಕೆ ತೃಪ್ತಿಇರಲಿ.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಪಕ್ಷದ ಹಿರಿಯ ನಾಯಕರಾಗಿದ್ದು, ಅವರಿಗೆ ಹೈಕಮಾಂಡ್ ನೀಡಿರುವ ಜವಾಬ್ದಾರಿಯ ಬಗ್ಗೆ ಕಾರ್ಯಕರ್ತರು ತೃಪ್ತಿಪಡಬೇಕು. ಪರಮೇಶ್ವರ್‌ ಅವರನ್ನು ಕೆಲಸಕ್ಕೆ ಆರಿಸಲಾಗಿದೆ. ಅದರ ಬಗ್ಗೆ ನಂಬಿಕೆ ಇಡಿ. ಹೈಕಮಾಂಡ್‌ ನಿರ್ಧಾರಗಳಿಗೆ ಗೌರವ ನೀಡಿ ಎಂದು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !