Monday, March 4, 2024

ಅಫ್ಘಾನಿಸ್ತಾನದಲ್ಲಿ ಪತನವಾಗಿರುವುದು ‘ಭಾರತೀಯ ವಿಮಾನವಲ್ಲ’: ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ವಿಮಾನ ಅಪಘಾತವು ಭಾರತೀಯ ನಿಗದಿತ ವಿಮಾನವಲ್ಲ ಅಥವಾ ನಿಗದಿತವಲ್ಲದ (ಎನ್‌ಎಸ್‌ಒಪಿ) / ಚಾರ್ಟರ್ ವಿಮಾನವಲ್ಲ. ಇದು ಮೊರೊಕನ್ ನೋಂದಾಯಿತ ಸಣ್ಣ ವಿಮಾನವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಇದು ಭಾರತೀಯ ವಿಮಾನವಲ್ಲ ಎಂದು ಡಿಜಿಸಿಎ ಅಧಿಕಾರಿ ದೃಢಪಡಿಸಿದ್ದಾರೆ.

ಬಡಾಕ್ಷನ್ ಪ್ರಾಂತ್ಯದ ಕುರಾನ್-ಮುಂಜನ್ ಮತ್ತು ಜಿಬಕ್ ಜಿಲ್ಲೆಗಳ ಜೊತೆಗೆ ಟೋಪ್ಖಾನಾ ಪರ್ವತಗಳಲ್ಲಿ ಅಪಘಾತಕ್ಕೀಡಾದ ವಿಮಾನವು ಮೊರೊಕನ್ ನೋಂದಾಯಿತ ಡಿಎಫ್ 10 ವಿಮಾನವಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಅಫ್ಘಾನಿಸ್ತಾನದ ಬಡಾಕ್ಷನ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ದೂರದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!