ಈ ಬಾರಿ ಫ್ಲವರ್‌ ಶೋಗೆ ಹೆಚ್ಚು ಜನ ಬಂದೇ ಇಲ್ಲ, ಕಾರಣ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಲಾಲ್‌ಬಾಗ್‌ನ ಫ್ಲವರ್‌ ಶೋಗೆ ಕಡಿಮೆ ಮಂದಿ ಭೇಟಿ ನೀಡಿದ್ದಾರೆ. ಹೌದು, ಇದಕ್ಕೆ ಕಾರಣ ಮಳೆರಾಯ! ಯಾವಾಗ ಮಳೆ ಅಬ್ಬರಿಸುತ್ತದೋ ಎನ್ನುವ ಕಾರಣಕ್ಕೆ ಹೆಚ್ಚಿನ ಜನರು ಫ್ಲವರ್‌ ಶೋಗೆ ಬಂದಿಲ್ಲ.

ಫ್ಲವರ್​ ಶೋದಿಂದಾಗಿ ತೋಟಗಾರಿಕಾ ಇಲಾಖೆಗೆ ಟಿಕೆಟ್‌ ಮೂಲಕ 3.04 ಕೋಟಿ ರೂ., ಸ್ಟಾಲ್‌ಗಳ ಮೂಲಕ 40 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಒಟ್ಟು 3.44 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಆದಾಗ್ಯೂ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಫ್ಲವರ್​ ಶೋಗೆ ಭೇಟಿ ನೀಡಿದವರ ಸಂಖ್ಯೆಯಲ್ಲಿ ಈ ವರ್ಷ ತುಸು ಕಡಿಮೆಯಾಗಿದೆ. 2022 ರಲ್ಲಿ ಡಾ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಿದ ಫಲಪುಷ್ಪ ಪ್ರದರ್ಶನದ ಸಮಯದಲ್ಲಿ, ಲಾಲ್‌ಬಾಗ್‌ನ ಇತಿಹಾಸದಲ್ಲೇ ಅತಿ ಹೆಚ್ಚು ಜನ ವೀಕ್ಷಿಸಿದ್ದರು. ಆ ವರ್ಷ 11 ಲಕ್ಷ ಮಂದಿ ವೀಕ್ಷಿಸಿದ್ದರು.

2023ರಲ್ಲಿ ಕೆಂಗಲ್ ಹನುಮಂತಯ್ಯನವರ ಥೀಮ್​ನಲ್ಲಿ ಏರ್ಪಡಿಸಿದ್ದ ಪುಷ್ಪ ಪ್ರದರ್ಶನಕ್ಕೆ ಸುಮಾರು 10.5 ಲಕ್ಷ ಮಂದಿ ಭೇಟಿ ನೀಡಿದ್ದರು. ನಗರದಲ್ಲಿ ಮೋಡ ಕವಿದ ವಾತಾವರಣ, ಮಳೆ ಇದ್ದುದರಿಂದ ಈ ವರ್ಷ ಜನಸಂದಣಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲವರ್ ಶೋ ನಡೆದ ಒಟ್ಟು ದಿನಗಳ ಪೈಕಿ ಕನಿಷ್ಠ ಮೂರು ದಿನಗಳ ಕಾಲ ಭಾರೀ ಮಳೆ ಮತ್ತು ಮೋಡ ಕವಿದ ವಾತಾವರಣವಿತ್ತು. ಆದ್ದರಿಂದ, ಆ ದಿನಗಳಲ್ಲಿ ಕಡಿಮೆ ಜನ ಬಂದಿದ್ದರು. ಆದರೆ, ಒಟ್ಟು ಲೆಕ್ಕದಲ್ಲಿ ಆಗಮಿಸಿದವರ ಸಂಖ್ಯೆ ಅಷ್ಟಾಗಿ ಕಡಿಮೆಯಾಗಿಲ್ಲ, ಪ್ರದರ್ಶನ ಯಶಸ್ವಿಯಾಗಿದೆ ಎಂದು ಲಾಲ್‌ಬಾಗ್‌ ಬೊಟಾನಿಕಲ್‌ ಗಾರ್ಡನ್‌ನ ಜಂಟಿ ನಿರ್ದೇಶಕ ಡಾ. ಎಂ ಜಗದೀಶ ತಿಳಿಸಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!