VIDEO | ಕನ್ನಡ ಮಾತಾಡೋದಷ್ಟೇ ಅಲ್ಲ, ಮೈಕೆಲ್‌ಗೆ ಕನ್ನಡ ಓದೋಕೂ ಬರುತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು 50 ದಿನ ಪೂರೈಸಿದ್ದಾರೆ, ಇದೀಗ ಇಬ್ಬರು ವೈಲ್ಡ್ ಕಾರ್ಡ್ ಸದಸ್ಯರು ಕೂಡ ಎಂಟ್ರಿ ಕೊಟ್ಟಿದ್ದಾರೆ.

ಈ ಮಧ್ಯೆ ಮೈಕಲ್ ಶೈನಿಂಗ್ ಮಾತ್ರ ಕಡಿಮೆಯಾಗಿಲ್ಲ. ಮೊನ್ನೆಯಷ್ಟೇ ಕನ್ನಡ ಚೆನ್ನಾಗಿ ಮಾತನಾಡ್ತೀರಿ ಎಂದು ಸುದೀಪ್ ಕಿಚ್ಚನ ಚಪ್ಪಾಳೆ ನೀಡಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡಿರೋ ಮೈಕೆಲ್ ಇದೀಗ ಕನ್ನಡವನ್ನು ಚೆನ್ನಾಗಿ ಕಲಿಯೋಕೆ ರೆಡಿಯಾಗಿದ್ದಾರೆ.

ಟಾಸ್ಕ್ ಒಂದರಲ್ಲಿ ಪ್ರಶ್ನೆ ಕೇಳುವ ಸಂದರ್ಭ ಎದುರಾಗಿದ್ದು, ಮೈಕೆಲ್ ಕನ್ನಡದಲ್ಲಿ ಬರೆದ ಪ್ರಶ್ನೆಗಳನ್ನು ಸ್ಪಷ್ಟವಾಗಿ ಓದಿದ್ದಾರೆ. ಮೈಕೆಲ್ ಓದುವ ರೀತಿ ನೋಡಿ ಮನೆಮಂದಿಯೆಲ್ಲಾ ದಂಗಾಗಿದ್ದಾರೆ. ಮೈಕಲ್ ನಾನು ಮಣ್ಣಿನ ಮಗ ಕನ್ನಡ ಓದ್ತೇನೆ ಎಂದು ಬೀಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!