ದರ್ಶನ್‌, ಪವಿತ್ರಾ ಅಷ್ಟೇ ಅಲ್ಲ ಆರು ಆರೋಪಿಗಳ ಬಟ್ಟೆ ಮೇಲೆ ರಕ್ತದ ಕಲೆ, ಎಫ್‌ಎಸ್‌ಎಲ್‌ ವರದಿಯಲ್ಲಿ ಏನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ  ವರದಿ ತಲುಪಿದ್ದು, ವರದಿಯಲ್ಲಿ ಹತ್ಯೆ ವೇಳೆ ದರ್ಶನ್‌, ಪವಿತ್ರಾ ಹಾಗೂ ಇನ್ನಿತರ ಆರು ಆರೋಪಿಗಳ ಬಟ್ಟೆ ಹಾಗೂ ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆಗಳು ಇರುವುದು ದೃಢಪಟ್ಟಿದೆ.

ಹತ್ಯೆ ನಡೆದ ಸಮಯದಲ್ಲಿ ಆರು ಆರೋಪಿಗಳು ಧರಿಸಿದ್ದ ಬಟ್ಟೆ, ಪಾದರಕ್ಷೆಗಳು ಮತ್ತು ಚರ್ಮದ ವಸ್ತುಗಳನ್ನು ಅವರ ಬಂಧನದ ನಂತರ ಅವರ ಮನೆಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಲಾಗಿತ್ತು.

ಈ ನಡುವೆ ವರದಿಯಲ್ಲಿನ ಅಂಶಗಳು ದರ್ಶನ್ ಅವರಿಗೆ ಎದುರಾಗಿರುವ ಕಂಟಕವನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಅಂತಿಮ ಎಫ್‌ಎಸ್‌ಎಲ್ ವರದಿಯಲ್ಲ. ಕೇವಲ 70 ರಷ್ಟು ವರದಿಯಷ್ಟೇ. ಉಳಿದ 30 ಪ್ರತಿಶತ ವರದಿಯು ಹೈದರಾಬಾದ್‌ನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಇನ್ನೂ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.

ವಶಪಡಿಸಿಕೊಂಡ ಬಟ್ಟೆಗಳನ್ನು ತೊಳೆದು ಸ್ವಚ್ಛಗೊಳಿಸಲಾಗಿತ್ತು ಎನ್ನಲಾಗಿದ್ದು. ಇದರ ಹೊರತಾಗಿಯೂ, ಲುಮಿನಲ್ ಪರೀಕ್ಷೆಯ ಮೂಲಕ ಆರೋಪಿಗಳ ಬಟ್ಟೆ ಹಾಗೂ ಶೂಗಳ ಮೇಲೆ ರಕ್ತದ ಕಲೆಗಳಿರುವುದನ್ನು ಪತ್ತೆ ಮಾಡಲಾಗಿದೆ.

ಲುಮಿನಲ್ ಎಂಬುದು ಒಂದು ಕೆಮಿಕಲ್. ಬಟ್ಟೆಯನ್ನ ವಾಶ್ ಮಾಡಿದ್ದರೂ ಹೀಮೋಗ್ಲೋಬಿನ್ ಅಂಶ ಹೋಗಿರುವುದಿಲ್ಲ. ಯಾವ ಬಟ್ಟೆಯ ಮೇಲೆ ರಕ್ತ ಕಲೆ ಇರುತ್ತದೆಯೋ ಅದರ ಮೇಲೆ ಲುಮಿನಲ್ ಕೆಮಿಕಲ್ ಬಳಿಯಲಾಗುತ್ತದೆ. ಆಗ ಹೀಮೋಗ್ಲೋಬಿನ್ ಜೊತೆ ವರ್ತಿಸುವ ಲುಮಿನಲ್ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದಿಸುತ್ತದೆ. ಈ ದ್ರಾವಣವನ್ನ ಸಂಗ್ರಹಿಸಿ ಆದರಿಂದ ಡಿಎನ್​ಎ ಸಂಗ್ರಹಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!