ಒತ್ತೆಯಾಳುಗಳಿಗೆ ಹಿಂಸೆ ಕೊಡ್ತಿಲ್ಲ, ಕಾಳಜಿ ಮಾಡ್ತಿದ್ದೇವೆ: ಹಮಾಸ್ ಉಗ್ರರಿಂದ ಮತ್ತೊಂದು ವಿಡಿಯೋ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒತ್ತೆಯಾಳುಗಳ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ, ಅವರಿಗೆ ಹಿಂಸೆ ಕೊಡುತ್ತಿಲ್ಲ ಎನ್ನುವಂಥ ವಿಡಿಯೋವೊಂದನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ.

ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧ ಆರಂಭವಾಗಿ 10 ದಿನಗಳೇ ಕಳೆದಿವೆ, ಇಸ್ರೇಲ್‌ನ ಕಿಬ್ಬುಟ್ಜ್ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್ ಸಂಗೀತ ಉತ್ಸವದ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದರು. ದಾಳಿ ನಡೆಸಿ ಸಾಕಷ್ಟು ಜನರನ್ನು ಒತ್ತೆಯಾಳಾಗಿ ಹಮಾಸ್ ಉಗ್ರರು ಇರಿಸಿಕೊಂಡಿದ್ದರು.  ಒತ್ತೆಯಾಳಾಗಿರುವ 21 ವರ್ಷದ ಯುವತಿಯ ವಿಡಿಯೋವನ್ನು ಉಗ್ರರು ಬಿಡುಗಡೆ ಮಾಡಿದ್ದಾರೆ.

ಇಸ್ರೇಲಿ ಯುವತಿ ಮಿಯಾ ಶೆಮ್ ಕೈಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಾವು ಒತ್ತೆಯಾಳುಗಳನ್ನು ಹಿಂಸಿಸುತ್ತಿಲ್ಲ, ಅವರ ಕಾಳಜಿ ವಹಿಸುತ್ತಿದ್ದೇವೆ ಎಂದು ತೋರಿಸುವ ರೀತಿಯ ವಿಡಿಯೋ ಇದಾಗಿದೆ.

ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ನನ್ನ ಕುಟುಂಬವನ್ನು ನೋಡಬೇಕು ಎಂದು ಶೋಹಮ್ ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!