ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಾಳೆ ಒಂದೆಡೆ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಮತ್ತೊಂದೆಡೆ 592 ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2023 ರ ಸಿಇಟಿ ( CET 2023) ಪರೀಕ್ಷೆ ನಡೆಸಲಿದೆ. ಈ ಬಾರಿ 2.61 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕೆಇಎ ನಡೆಸುವ 2023 ರ ಸಿಇಟಿ ಮೇ. 20 ರಿಂದ 22 ರವರೆಗೆ ನಡೆಯಲಿದ್ದು, ಈ ಬಾರಿ ಪರೀಕ್ಷೆಗೆ 2.61 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಹೀಗಾಗಿ ಹಲವೆಡೆ ನಾಳೆ ವಾಹನ ಸಂಚಾರದಲ್ಲಿ ಮಹತ್ವದ ಬದಲಾವಣೆ ಇರಲಿದೆ.
ನಾಳೆ ಮಧ್ಯಾಹ್ನವೇ 12.30ಕ್ಕೆ ಬೆಂಗಳೂರಿನಲ್ಲಿಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಿರುವುದರಿಂದ ಪರೀಕ್ಷಾರ್ಥಿಗಳಿಗೆ ಟ್ರಾಫಿಕ್ ಸಮಸ್ಯೆ ಭೀತಿ ಶುರುವಾಗಿದೆ.
ಹೀಗಾಗಿ ಟ್ರಾಫಿಕ್ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಪರೀಕ್ಷಾರ್ಥಿಗಳಿಗೆ ವಿಶೇಷ ಸೂಚನೆಯನ್ನು ನೀಡಿದ್ದಾರೆ. ನಾಳೆ ನಡೆಯುವ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಬೆಳಗ್ಗೆ 9 ಗಂಟೆಯ ಒಳಗಾಗಿ ಪರೀಕ್ಷಾ ಕ್ಷೇಂದ್ರಕ್ಕೆ ತಲುಪಬೇಕು. ಇಲ್ಲವಾದರೆ ಟ್ರಾಫಿಕ್ನಲ್ಲಿ ಸಿಲುಕುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಿರುವುದರಿಂದ ಪರೀಕ್ಷಾರ್ಥಿಗಳಿಗೆ ಟ್ರಾಫಿಕ್ ಸಮಸ್ಯೆ ಭೀತಿ ಶುರುವಾಗಿದೆ. ಯಾವುದೇ ಸಮಸ್ಯೆಗಳು ನಡೆಯದಂತೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಕಂಠೀರವ ಸ್ಟೋಡಿಯೋ ಸುತ್ತ ಮುತ್ತ ಇರುವ ಪರೀಕ್ಷಾ ಕೇಂದ್ರಗಳ ಡಿಟೇಲ್ಸ್ ಗಳನ್ನ ವೆಬ್ ಸೈಟ್ ನಲ್ಲಿ ಹಾಕುತ್ತೇವೆ. ಈ ಸ್ಟೇಡಿಯಂ ಸುತ್ತಮುತ್ತಾ ಸೆಂಟರ್ ಗಳಿರುವ ವಿಧ್ಯಾರ್ಥಿಗಳು ಎರಡು ಗಂಟೆಗೂ ಮೊದಲೇ ಬರಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಧಿಕಾರದ ಕಾರ್ಯ ನಿರ್ವಹಕ ನಿರ್ದೇಶಕಿ ರಮ್ಯ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಎಲ್ಲೆ ಟ್ರಾಫಿಕ್ ಸಮಸ್ಯೆ ಇದ್ರು ಹಾಲ್ಟ್ ಟಿಕೇಟ್ ತೋರಿಸಿ ನೀವು ಸೆಂಟರ್ ಗಳನ್ನ ತಲುಪಬಹುದು, ರೋಡ್ ಗಳು ಕ್ಲೋಸ್ ಆಗಿದ್ರು ಟ್ರಾಪಿಕ್ ಪೋಲಿಸರು ಅನುವು ಮಾಡಿಕೊಡ್ತಾರೆ. ಆದ್ರೆ ಹಾಲ್ ಟಿಕೇಟ್ ಕಡ್ಡಾಯವಾಗಿ ತೋರಿಸಬೇಕು ಎಂದು ಹೇಳಿದ್ದಾರೆ.