ಯಾವುದೂ ಹೊಸ ಬೇಡಿಕೆಗಳಲ್ಲ…ಇದು ಈಡೇರಿಸದ ಬೇಡಿಕೆ: ಪ್ರಧಾನಿ ಮೋದಿಗೆ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರಗೊಂಡರುವಂತೆಯೇ ರೈತ ನಾಯಕ ರಾಕೇಶ್ ಟಿಕಾಯತ್ ನೇತೃತ್ವದ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಪತ್ರದಲ್ಲಿ ‘ಸರ್ಕಾರ ರೈತ ಸಂಘಟನೆಗಳ ನಡುವೆ ಒಡಕು ಮೂಡಿಸಲು ಯತ್ನಿಸುತ್ತಿದೆ. ಈಗ ರೈತರು ಕೇಳುತ್ತಿರುವುದು ಯಾವುದೂ ಹೊಸ ಬೇಡಿಕೆಗಳಲ್ಲ.. ಈ ಹಿಂದೆ ನಡೆದ ಪ್ರತಿಭಟನೆಯಲ್ಲಿ ಸರ್ಕಾರ ಈಡೇರಿಸುತ್ತೇವೆ ಎಂದು ಈ ವರೆಗೂ ಈಡೇರಿಸದ ಬೇಡಿಕೆಗಳಾಗಿವೆ ಎಂದು ಹೇಳಿದೆ.

MSP ಕಾನೂನು, ಸ್ವಾಮಿನಾಥನ್ ಸಮಿತಿ ವರದಿ ಅನುಷ್ಠಾನ ಮತ್ತು ಸಾಲ ಮನ್ನಾ ಎಲ್ಲಾ ರೈತರ ಕಾಳಜಿ ಮತ್ತು ಈ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡುತ್ತೇವೆ. ಎಂಎಸ್ಪಿ ಖಾತರಿ ಕಾನೂನು ಮತ್ತು ಸ್ವಾಮಿನಾಥನ್ ಸಮಿತಿ ವರದಿ, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಸಾಲ ಮನ್ನಾ ದೇಶಾದ್ಯಂತ ರೈತರ ಸಮಸ್ಯೆಗಳು. ಹಲವಾರು ರೈತ ಸಂಘಟನೆಗಳಿವೆ ಮತ್ತು ಅವರ ಸಮಸ್ಯೆಗಳು ವಿಭಿನ್ನವಾಗಿವೆ. ದೆಹಲಿಯತ್ತ ಪಾದಯಾತ್ರೆ ಮಾಡುತ್ತಿರುವ ಈ ರೈತರಿಗೆ ಸರ್ಕಾರ ಸಮಸ್ಯೆ ಸೃಷ್ಟಿಸಿದರೆ ನಾವು ಅವರಿಗೆ ಬೆಂಬಲ ನೀಡುತ್ತೇವೆ.

ರೈತರ ಮೇಲಿನ ದಾಳಿ ನಾಚಿಕೆಗೇಡು ಫೆಬ್ರವರಿ 16 ರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಗ್ರಾಮೀಣ ಭಾರತ್ ಬಂದ್ನಲ್ಲಿ ಎಲ್ಲಾ ಸಮಾನ ಮನಸ್ಕ ರೈತ ಸಂಘಟನೆಗಳು ಒಗ್ಗೂಡಿ ಪಾಲ್ಗೊಳ್ಳುವಂತೆ ಒತ್ತಾಯಿಸಿದೆ.ಎಸ್ಕೆಎಂ ವಿಭಜಿತ ಗುಂಪು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ನಡೆದ ‘ದೆಹಲಿ ಚಲೋ’ ಆಂದೋಲನದ ವೇಳೆ ಅಂಬಾಲಾ ಬಳಿ ರೈತರ ಮೇಲೆ ಅಶ್ರುವಾಯು ಸಿಡಿಸಲಾಗಿದೆ. ಹರಿಯಾಣ ಪೊಲೀಸರು ಅವರನ್ನು ರಾಷ್ಟ್ರ ರಾಜಧಾನಿಗೆ ಹೋಗದಂತೆ ತಡೆಯುತ್ತಿದ್ದಾರೆ. ಮೋದಿ ಸರ್ಕಾರ ರೈತರ ಮೇಲೆ ದಾಳಿ ನಡೆಸಿದ್ದು ನಾಚಿಕೆಗೇಡಿನ ಸಂಗತಿ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧರ್ ಹೇಳಿದ್ದಾರೆ.

ಅಲ್ಲದೆ ನಾವು ಹೇಳುತ್ತಿರುವುದು ಹೊಸ ಬೇಡಿಕೆಯಲ್ಲ. ಅದು ಸರ್ಕಾರ ನಮಗೆ ನೀಡಿದ ಬದ್ಧತೆಯಾಗಿತ್ತು. ನಾವು ಮತ್ತೆ ಮತ್ತೆ ಆ ಬದ್ಧತೆಗಳ ಕಡೆಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ. ಆದರೆ ಸರಕಾರ ಇಂದಿಗೂ ಯಾವುದೇ ಗಂಭೀರತೆ ತೋರಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!