ಹೊಸದಿಗಂತ ಡಿಜಿಟಲ್ ಡೆಸ್ಕ್
ಕೊರೋನಾದಿಂದ ತಂದೆ-ತಾಯಿ ಕಳೆದುಕೊಂಡ ಯುವತಿಗೆ ಮನೆ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲಾಗುತ್ತಿದ್ದು, ಈ ಪ್ರಕರಣ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡುವಂತೆ ಹಣಕಾಸು ಸೇವೆಗಳು ಮತ್ತು ಜೀವ ವಿಮಾ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭೋಪಾಲ್‌ನ 17 ವರ್ಷದ ವನಿಶಾ ಪಾಠಕ್‌ನ ತಂದೆ ಎಲ್‌ಐಸಿ ಏಜೆಂಟ್ ಆಗಿದ್ದು, ಆಕೆಯ ತಂದೆ ಎಲ್‌ಐಸಿಯಿಂದ ಗೃಹಸಾಲ ಪಡೆದಿದ್ದರು. ಸುಮಾರು 29 ಲಕ್ಷದಷ್ಟು ಸಾಲ ಇನ್ನೂ ಕಟ್ಟಲು ಬಾಕಿಯಿದೆ.
ಆದರೆ ತಂದೆ – ತಾಯಿ ಇಬ್ಬರೂ ಕೊರೋನಾಗೆ ಲಿಯಾಗಿದ್ದಾರೆ. ಮಗಳು ಇನ್ನೂ ಹದಿನೆಂಟು ದಾಟಿಲ್ಲ. ಆದರೆ ಎಲ್‌ಐಸಿ ಅಧಿಕಾರಿಗಳು ನೊಟೀಸ್ ಮೇಲೆ ನೊಟೀಸ್ ನೀಡಿ ಮನಸಿಕೆ ಹಿಂಸೆ ನೀಡುತ್ತಿದ್ದಾರೆ. ಆಕೆ ಇನ್ನೂ ಓದುತ್ತಿರುವ ಹುಡುಗಿ ಎಲ್ಲಿಂದ ತಿಂಗಳ ಕಂತು ಬರಿಸಲು ಸಾಧ್ಯ. ಆದರೂ ಎಲ್‌ಐಸಿ ಅಧಿಕಾರಿಗಳು ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ.
ಈ ವಿಚಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕೆ ಬಂದಿದ್ದು, ಇಡೀ ವೃತ್ತಾಂತದ ಮಾಹಿತಿ ನೀಡುವಂತೆ ಕೋರಿದ್ದಾರೆ. ಎಲ್‌ಐಸಿ ಮೇಲಾಧಿಕಾರಿಗಳಿಗೆ ನಿರ್ಮಲಾ ಸೀತಾರಾಮನ್ ಆದೇಶಿಸಿದ್ದು, ಪ್ರಕರಣ ಏನು ಮತ್ತು ಸದ್ಯ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ.