ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಅಸುರಕ್ಷಿತ ಆಹಾರ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇಂಡಿಗೋಗೆ ಶೋಕಾಸ್ ನೊಟೀಸ್ ನೀಡಿದೆ.
ವಿಮಾನದಲ್ಲಿ ನೀಡಿದ್ದ ಸ್ಯಾಂಡ್‌ವಿಚ್‌ನಲ್ಲಿ ಹುಳು ಕಂಡುಬಂದಿತ್ತು. ಈ ಬಗ್ಗೆ ಎಫ್‌ಎಸ್‌ಎಸ್‌ಎಐ ಕ್ರಮ ಕೈಗೊಂಡಿದೆ. ಇಂಡಿಗೋ ಶೋಕಾಸ್ ನೊಟೀಸ್ ಸ್ವೀಕರಿಸಿದ್ದು, ಪ್ರೊಟೊಕಾಲ್ ಪ್ರಕಾರ ಉತ್ತರ ನೀಡುವುದಾಗಿ ಹೇಳಿದೆ.
ಡಿಸೆಂಬರ್ 29ರಂದು ಪ್ರಯಾಣಿಕರೊಬ್ಬರಿಗೆ ಹುಳಗಳಿರುವ ಸ್ಯಾಂಡ್‌ವಿಚ್ ಸಿಕ್ಕಿತ್ತು. ಅದನ್ನು ವಿಡಿಯೋ ಮಾಡಿ ಪ್ರಯಾಣಿಕ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದರು. ತಕ್ಷಣವೇ ಇಂಡಿಗೋ ಕ್ಷಮೆ ಕೇಳಿತ್ತು.