ಸಿಎಂ- ಡಿಸಿಎಂ ಬದಲಾವಣೆ ಮಾತನಾಡುವ ಶಾಸಕರಿಗೆ ನೊಟೀಸ್‌: ಡಿಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ- ಡಿಸಿಎಂ ಬದಲಾವಣೆ ಕುರಿತು ಮಾತನಾಡುವ ಶಾಸಕರಿಗೆ ನೊಟೀಸ್‌ ನೀಡುತ್ತೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆಗೂ ಮಾತನಾಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸಿಎಂ- ಡಿಸಿಎಂ ದಂಗಲ್ ವಿಚಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರಿಂದ ಪ್ರಸ್ತಾಪವಾಯಿತು. ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಒತ್ತಾಯ ಮಾಡಿದರು.

ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್, ಕೆಲವರಿಗೆ ಮೈಕ್ ಕಂಡ ತಕ್ಷಣ ಮಾತಾಡುವ ದೊಡ್ಡ ಚಟವಿದೆ. ಆದರೆ ಇದನ್ನು ಎಐಸಿಸಿ ಗಮನಿಸುತ್ತಿದೆ. ಗೊಂದಲ ಮೂಡಿಸುತ್ತಿರುವವರ ಬಗ್ಗೆ ಅರಿವಿದೆ. ಸಭೆಯಲ್ಲಿ ಶಾಸಕರಿಗೆ ನೊಟೀಸ್ ನೀಡಲಾಗುವುದು. ನಾನು ಮತ್ತು ಸಿಎಂ ಈ ಬಗ್ಗೆ ಮಾತಾಡಿದ್ದೇವೆ. ಸಿಎಂ ಜೊತೆಗೆ ಕೆಲವರ ಬಗ್ಗೆ ಮಾತಾಡಿದ್ದೇನೆ. ಶೀಘ್ರದಲ್ಲೇ ಕೆಲವು ಶಾಸಕರಿಗೆ ನೊಟೀಸ್ ನೀಡುತ್ತೇವೆ ಎಂದು ಹೇಳಿದರು.

ನಾನು ಅಧ್ಯಕ್ಷನಾಗುವ ಮೊದಲು ಪಕ್ಷ ಹೇಗಿತ್ತು, ಈಗ ಹೇಗಿದೆ ನೋಡಿ. ಸೋನಿಯಾ ಗಾಂಧಿ ಪಕ್ಷ ಸಂಕಷ್ಟದಲ್ಲಿದ್ದಾಗ ನನ್ನ ಅಧ್ಯಕ್ಷನನ್ನಾಗಿ ಮಾಡಿದರು. ಈಗ ಪಕ್ಷ ಸದೃಢವಾಗಿದೆ, ಇನ್ನಷ್ಟು ಬಲಿಷ್ಠ ಮಾಡುವ ಹೊಣೆಗಾರಿಕೆ ನನ್ನ ಮೇಲಿದೆ. ಯಾರೋ ಒಂದಿಬ್ಬರು ನನ್ನನ್ನು ಬಗ್ಗಿಸಬಹುದು ಅಂತ ಭಾವಿಸಿದ್ದರೆ ಅದು ಆಗದ ಕೆಲಸ ಎಂದು ಶಿವಕುಮಾರ್‌ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!