ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ದಿಢೀರ್ ಭೇಟಿ ನೀಡಿದ್ದು, ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಗಾಗೆ ನೊಟೀಸ್ ಕಳುಹಿಸಲಾಗಿದೆ.
ಝಡ್ ಪ್ಲಸ್ ಭದ್ರತೆ ಹೊಂದಿರುವ ರಾಷ್ಟ್ರ ನಾಯಕ ಈ ರೀತಿ ದಿಢೀರ್ ಎಂದು ಕಾಲೇಜಿನ ಹಾಸ್ಟೆಲ್‌ನಲ್ಲಿ ಕಾಣಿಸಿದ್ದು ಅವರ ಘನತೆಗೆ ಮೀರಿದ್ದು ಎನ್ನುವ ನೊಟೀಸ್‌ನ್ನು ಪ್ರಾಂಶುಪಾಲರು ನೀಡಿದ್ದಾರೆ.
ಮೂರು ವಾಹನದೊಂದಿಗೆ ಅನಿರೀಕ್ಷಿತವಾಗಿ ಹಾಸ್ಟೆಲ್‌ಗೆ ಭೇಟಿ ನೀಡಿದ್ದು, ಸಾಕಷ್ಟು ನಿಯಮಗಳ ಉಲ್ಲಂಘನೆಯಾಗಿದೆ. ಯಾವುದೇ ವ್ಯಕ್ತಿ ಹಾಸ್ಟೆಲ್ ಆವರಣದಲ್ಲಿ ಶೈಕ್ಷಣಿಕ ಹಾಗೂ ಅಲ್ಲಿನ ವಿದ್ಯಾರ್ಥಿಗಳ ಕೌನ್ಸಿಲ್ ಚಟುಚಟಿಕೆ ಬಿಟ್ಟು ಇನ್ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎನ್ನಲಾಗಿದೆ.
ಕಳೆದ ವಾರ ವಿವಿ ಹಾಸ್ಟೆಲ್‌ಗೆ ಭೇಟಿ ನೀಡಿದ ರಾಗಾ ವಿದ್ಯಾರ್ಥಿಗಳ ಜೊತೆ ಸಂವಾರದ ನಡೆಸಿ, ಊಟ ಮಾಡಿದ್ದರು.