ನೀಟ್ ಪರೀಕ್ಷೆಗೆ ಬಂದಾಕೆಗೆ ಒಳ ಉಡುಪು ಕಳಚಲು ಸೂಚನೆ: ಪೋಷಕರು ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೋರ್ವಳಿಗೆ ಒಳ ಉಡುಪು ಕಳಚುವಂತೆ ಸೂಚಿಸಿ ತಪಾಸಣಾ ಸಿಬ್ಬಂದಿಗಳು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆಕೆಯ ಪೋಷಕರು ದೂರು ನೀಎಇರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ನೀಟ್ ಪರೀಕ್ಷಾ ನಿಯಮದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವುದೇ ಮೆಟಲ್ ಸಂಬಂಧಿತ ವಸ್ತುಗಳನ್ನು ಕೊಠಡಿಗೆ ಕೊಂಡೊಯ್ಯುವಂತಿಲ್ಲ. ತಪಾಸಣೆ ವೇಳೆ ವಿದ್ಯಾರ್ಥಿನಿಯರ ದೇಹದಲ್ಲಿ ಮೆಟಲ್ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಈ ಸೂಚನೆ ನೀಡಿದ್ದರು.
ಬೆಲ್ಟ್, ಬ್ರಾ, ಇತರ ಒಳ ಉಡುಪಿನಲ್ಲಿರುವ ಮೆಟಲ್ ವಸ್ತುಗಳ ಕುರಿತು ಪರೀಕ್ಷಾ ನಿಯಮಾವಳಿಯಲ್ಲಿ ಸ್ಪಷ್ಟತೆಯಿಲ್ಲದ ಕಾರಣ ಇದನ್ನೇ ಸಿಬ್ಬಂದಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದು, ಇದರಿಂದಾಗಿ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಮುಜುಗರಕ್ಕೆ ಒಳಪಡಬೇಕಾಯಿತು. ಈ ಬಗ್ಗೆ ಆಕ್ರೋಶಿತರಾದ ಪೋಷಕರು ಕೊಟ್ಟಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇರಳದ ಮಾರ್ಥೋಮಾ ಶಿಕ್ಷಣ ಸಂಸ್ಥಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ದೂರಿನ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ಸಂಸ್ಥೆ, ನೀಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ತಪಾಸಣೆ ಖಾಸಗಿ ಎಜೆನ್ಸಿ ಸಿಬ್ಬಂದಿಗಳು ಮಾಡಿದ್ದಾರೆ. ಇದರಲ್ಲಿ ಶಿಕ್ಷಣ ಸಂಸ್ಥೆಯ ಪಾತ್ರವಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!