ದೆಹಲಿ ಹೈಕೋರ್ಟ್ ನಿಂದ ಯಾಸಿನ್ ಮಲಿಕ್​​​ಗೆ ನೊಟೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್​​​ಗೆ (Yasin Malik) ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಡಿದ ಮನವಿ ನಂತರ ದೆಹಲಿ ಹೈಕೋರ್ಟ್ ಯಾಸಿನ್ ಮಲಿಕ್​​​ಗೆ ನೋಟಿಸ್ ಜಾರಿ ಮಾಡಿದೆ.

ಮಲಿಕ್​​​ಗೆ ಮರಣದಂಡನೆ ವಿಧಿಸಬೇಕೆಂದು ಕೋರಿ ಎನ್​​​​ಐಎ ಶುಕ್ರವಾರ ದೆಹಲಿ ಹೈಕೋರ್ಟ್​​ ಮೊರೆ ಹೋಗಿದ್ದು ಅಂತಹ ಭೀಕರ ಭಯೋತ್ಪಾದಕಕ್ಕೆ ಮರಣದಂಡನೆ ನೀಡದಿರುವುದು ನ್ಯಾಯದ ತಪ್ಪಿಗೆ ಕಾರಣವಾಗುತ್ತದೆ ಎಂದು ತಿಳಿಸಿದೆ.

ಕಳೆದ ವರ್ಷ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಜೆಕೆಎಲ್​​​​ಎಫ್​​​​ ಮುಖ್ಯಸ್ಥರಿಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ವಿಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!