ವನ್ಯಜೀವಿಗಳ ವಸ್ತುಗಳನ್ನು ಹಿಂತಿರುಗಿಸಲು ಅಧಿಸೂಚನೆ: ಸರಕಾರದ ಆದೇಶಕ್ಕೆ ಕೋರ್ಟ್ ತಡೆ

ಹೊಸದಿಗಂತ ವರದಿ, ಮಡಿಕೇರಿ:

ವನ್ಯಜೀವಿಗಳ, ಪ್ರಾಣಿವಸ್ತುಗಳು ಮತ್ತು ಟ್ರೋಫಿಯನ್ನು ಮೂರು ತಿಂಗಳ ಒಳಗೆ ಅಧ್ಯರ್ಪಿಸಲು ಸರಕಾರ ಹೊರಡಿಸಿರುವ ಅಧಿಸೂಚನೆಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದಿದೆ 2003 ಅಧಿಸೂಚನೆಯ ಅಧಿನಿಯಮಗಳಿಗೆ ಸಂಬಂಧಿಸಿದಂತೆ ಜನವರಿ 1 ರಂದು ಕರ್ನಾಟಕ ಸರ್ಕಾರವು ವನ್ಯಜೀವಿಗಳ, ಪ್ರಾಣಿವಸ್ತುಗಳು ಮತ್ತು ಟ್ರೋಫಿಯನ್ನು 3 ತಿಂಗಳ ಒಳಗೆ ಸರ್ಕಾರಕ್ಕೆ ಅಧ್ಯರ್ಪಿಸಲು ಅಧಿಸೂಚನೆ ನಿಯಮಾವಳಿಗಳನ್ನು ರಚಿಸಿ ಅದೇಶ ಹೊರಡಿಸಲಾಗಿತ್ತು.

ಈ ಅಧಿಸೂಚನೆಯ ಅಧಿನಿಯಮಗಳ ವಿರುದ್ಧ ಕೊಡಗಿನವರಾದ ರಂಜಿ ಪೂಣಚ್ಚ ಮತ್ತು ಕುಟ್ಟಪ್ಪ ಎಂಬವರುಗಳು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾವೆ (ಸಂಖ್ಯೆ : 5199-2024) ದಾಖಲಿಸಿದ್ದರು.

ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಉಚ್ಛ ನ್ಯಾಯಾಲಯವು ಸರಕಾರ ಹೊರಡಿಸಿರುವ ಅಧಿಸೂಚನೆಯ ಅಧಿನಿಯಮಗಳಿಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ಮಣ್ಣ ಅವರು ತಿಳಿಸಿದ್ದಾರೆ.

ಆಲ್ಲದೆ ಈ ವಿಚಾರವಾಗಿ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!