CAA ನಿಯಮ ಜಾರಿಗೆ ಅಧಿಸೂಚನೆ: ಕೇಂದ್ರ ಸರಕಾರ ವಿರುದ್ಧ ಮಮತಾ ಬ್ಯಾನರ್ಜಿ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕೇಂದ್ರ ಗೃಹ ಸಚಿವಾಲಯ ಪೌರತ್ವ ತಿದ್ದುಪಡಿ ಕಾಯ್ದೆ (CAA) ನಿಯಮ ಜಾರಿಗೆ ಅಧಿಸೂಚನೆ ಹೊರಡಿಸಿದ್ದು, ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸಮುದಾಯಗಳ ನಡುವೆ ಇದು ತಾರತಮ್ಯ ಮಾಡಿದಲ್ಲಿ ಇದನ್ನು ವಿರೋಧ ಮಾಡುವುದಾಗಿ ತಿಳಿಸಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಪಾಲಿಗೆ ಸೂಕ್ಷ್ಮ ವಿಚಾರವಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಅಶಾಂತಿಯನ್ನು ನಾವು ಬಯಸುವುದಿಲ್ಲ ಎಂದಿದ್ದಾರೆ.

ಆರು ತಿಂಗಳ ಹಿಂದೆ ನೀವು ಈ ನಿಯಮಗಳನ್ನು ತಿಳಿಸಬೇಕಿತ್ತು. ಇದರಲ್ಲಿ ಒಳ್ಳೆಯ ವಿಚಾರಗಳಿದ್ದರೆ, ನಾವು ಯಾವಾಗಲೂ ಬೆಂಬಲ ನೀಡುತ್ತೇವೆ ಹಾಗೂ ಅದಕ್ಕೆ ಮೆಚ್ಚುಗೆ ಸೂಚಿಸುತ್ತೇವೆ. ಆದರೆ, ಇದು ದೇಶಕ್ಕೆ ಒಳ್ಳೆಯದಾಗುವ ವಿಚಾರವಲ್ಲ ಎಂದಿದ್ದರೆ, ಟಿಎಂಸಿ ಖಂಡಿತವಾಗಿಯೂ ದನಿ ಎತ್ತುವುದು ಮಾತ್ರವಲ್ಲ ವಿರೋಧವನ್ನೂ ಮಾಡುತ್ತದೆ. ರಂಜಾನ್‌ಗೆ ಮುಂಚಿತವಾಗಿ ದಿನಾಂಕವನ್ನು ಯಾಕೆ ಆಯ್ಕೆ ಮಾಡಲಾಗಿದೆ ಎನ್ನುವುದು ನನಗೆ ಗೊತ್ತಿದೆ. ಜನರು ಶಾಂತವಾಗಿರಲು ಮತ್ತು ಯಾವುದೇ ವದಂತಿಗಳನ್ನು ಹಬ್ಬಿಸಬಾರದು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!